VIDEO

ಮನ್ಸೂರ್ ಖಾನ್ ದುಬೈಯಲ್ಲಿಲ್ಲ! IMA ಪ್ರಕರಣಕ್ಕೆ ಹೊಸ ಟ್ವಿಸ್ಟ್

18, Jun 2019, 2:24 PM IST

ಬೆಂಗಳೂರು (ಜೂ. 18): ಹೂಡಿಕೆದಾರರಿಗೆ ಕೋಟ್ಯಾಂತರ ರೂಪಾಯಿ ವಂಚಿಸಿ ತಲೆಮರೆಸಿಕೊಂಡಿರುವ IMA ಮಾಲೀಕ ಮನ್ಸೂರ್ ಖಾನ್, ಅಡಗುತಾಣದ ಬಗ್ಗೆ ಹೊಸ ಮಾಹಿತಿ ಲಭ್ಯವಾಗಿದೆ. ಇಷ್ಟರವರೆಗೆ, ಆತ ದುಬೈಯಲ್ಲಿ ಅವಿತಿದ್ದಾನೆ ಎಂದು ಮಾಹಿತಿ ಸಿಕ್ಕಿತ್ತು. ಆದರೆ ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಆತ ದುಬೈಯಿಂದಲೂ ಕಾಲ್ಕಿತ್ತಿದ್ದಾನೆ.  ​​​​​​

ಆತ ಈಗ ಎಲ್ಲಿದ್ದಾನೆ, ಏನು ಪ್ಲಾನ್ ಮಾಡುತ್ತಿದ್ದಾನೆ ಎಂಬ ಬಗ್ಗೆ  ಸುವರ್ಣನ್ಯೂಸ್‌ಗೆ exclusive ಮಾಹಿತಿ ಲಭ್ಯವಾಗಿದೆ. ನಮ್ಮ ಪ್ರತಿನಿಧಿ ರಮೇಶ್ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದ್ದಾರೆ.   

ಹಲಾಲ್ ಹೂಡಿಕೆ ಹೆಸರಿನಲ್ಲಿ, IMA ಸಂಸ್ಥೆಯ ಮಾಲೀಕ  ಮನ್ಸೂರ್ ಖಾನ್ ಲಕ್ಷಾಂತರ ಹೂಡಿಕೆದಾರರಿಗೆ, 2000 ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣ ವಂಚಿಸಿದ್ದಾನೆ. ಮನ್ಸೂರ್ ಜೊತೆ ಕೆಲ ರಾಜಕಾರಣಿಗಳು ಮತ್ತು ಅಧಿಕಾರಿಗಳ ಹೆಸರು ಕೂಡಾ ಕೇಳಿಬಂದಿದೆ. ಈಗಾಗಲೇ 40 ಸಾವಿರಕ್ಕಿಂತಲೂ ಹೆಚ್ಚು ದೂರುಗಳು ಮನ್ಸೂರ್ ಖಾನ್ ವಿರುದ್ಧ ದಾಖಲಾಗಿವೆ.