ಕಿರುತೆರೆ ನಟಿಯ ಕಿರಿಕ್, ಅಪಘಾತ ಎಸಗಿ ಯುವತಿ ಮೇಲೆ ಹಲ್ಲೆ!

Mar 8, 2024, 4:31 PM IST

ಬೆಂಗಳೂರು (ಮಾ.8): ಕನ್ನಡದ ಖ್ಯಾತ ಕಿರುತೆರೆ ನಟಿ ಅಪಘಾತ ಎಸಗಿ ಬಳಿಕ ಯುವತಿ ಜೊತೆ ಕಿರಿಕ್ ಮಾಡಿಕೊಂಡಿದ್ದು ಈ ಘಟನೆ ಈಗ ವೈರಲ್ ಆಗಿದೆ. ನಟಿಯ ಪುಂಡಾಟ ತಡವಾಗಿ  ಬೆಳಕಿಗೆ ಬಂದಿದ್ದು, ಆಕ್ಸಿಡೆಂಡ್ ಮಾಡಿ ಯುವತಿ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ನಟಿ ಹಾಗೂ ಅವರ ಸಹಚರನಿಂದ ಯುವತಿ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಡಿಸೆಂಬರ್ 6ರಂದು ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಬಳಿ ಸಂಜೆ 5 ಗಂಟೆಗೆ ಈ ಘಟನೆ ನಡೆದಿದ್ದು, ಲಕ್ಷ್ಮಿ ಅವರು ಈ ವೇಳೆ ಮದ್ಯಪಾನ ಮಾಡಿದ್ದರು. ಪೊಲೀಸ್ ಠಾಣೆಗೆ ಹೋಗಿದ್ದೆವು. ಆದರೆ ಎಫ್‌ಐಆರ್ ದಾಖಲಿಸಲು ಪೊಲೀಸರು ಹಿಂದೇಟು ಹಾಕಿದರು. ಬಳಿಕ ನ್ಯಾಯಾಲಯದ ಮೊರೆ ಹೋದೆವು ಎಂದು ಯುವತಿಯ ಕಡೆಯವರು ತಿಳಿಸಿದ್ದಾರೆ.