Apr 28, 2022, 1:57 PM IST
ಮಡಿಕೇರಿ (Madikeri) ನಗರ ಇರೋದೆ ಬೆಟ್ಟದ ತುತ್ತ ತುದಿಯಲ್ಲಿ. ಹಾಗಾಗಿ ಈ ನಗರ ಒಂದು ರೀತಿಯಲ್ಲಿ ಧರೆಗಿಳಿದ ಸ್ವರ್ಗ. ಆದ್ರೆ ಇದೇ ನಗರದ ಹೃದಯಭಾಗದಲ್ಲೇ ಇರೋ ಹಿಲ್‌ಪಾಯಿಂಟ್ (Hill point) ಒಂದು ಪುಂಡಪೋಕರಿಗಳ ದಾಳಿಗೆ ಸಿಲುಕಿ ಹಾಳಾಗಿ ಹೋಗಿದೆ. ಇಲ್ಲಿ ಎಂಜಾಯ್ ಮಾಡೋಕೆ ಅಂತ ಬರೋ ಕಿಡಿಗೇಡಿಗಳು ಕುಡಿದ ಬಳಿಕ ಮದ್ಯದ ಬಾಟಲಿಗಳನ್ನ ಅಲ್ಲೇ ಒಡೆದು ದಾಂಧಲೆ ಮಾಡುತ್ತಾರೆ. ಹಾಗಾಗಿ ಬೆಟ್ಟದ ತುಂಬೆಲ್ಲಾ ಬರೇ ಗಾಜಿನ ಚೂರುಗಳೇ ತುಂಬಿ ಹೋಗಿವೆ. ಎಲ್ಲಿ ನೋಡಿದ್ರೂ ಬರೇ ಗಾಜಿನಚೂರುಗಳು. ಬೆಟ್ಟದ ಮೇಲೆ ಮೊಸಾಯಿಕ್ ಹಾಕಿದಂತೆ ಕಾಣೋ ಮಧ್ಯದ ಬಾಲಿಗಳ ಚೂರುಗಳು ಕಾಣುತ್ತವೆ.
ಹಾಗೆ ನೋಡಿದ್ರೆ ಇದೊಂದು ಒಳ್ಳೆಯ ಪಿಕ್ನಿಕ್ ಸ್ಪಾಟ್ (Picnic Spot). ಇಲ್ಲಿ ಕಾಡು ಹಣ್ಣುಗಳು ಯಥೇಚ್ಛವಾಗಿ ಸಿಗುತ್ತವೆ. ಇಲ್ಲಿಗೆ ಬಹಳಷ್ಟು ಮಂದಿ ಕುಟುಂಬ ಸಮೇತವಾಗಿ ಬಂದು ಸಮಯ ಕಳೆದು ಹೋಗುತ್ತಿದ್ರು. ಆದ್ರೆ ಯಾವಾಗ ಇಲ್ಲಿ ಅನೈತಿಕ ಚಟುವಟಿಕೆಗಳು ಹೆಚ್ಚಾದವೋ ಸಂಸಾರಸ್ಥರು ಇತ್ತ ಮುಖ ಹಾಕುತ್ತಿಲ್ಲ. ಇದು ಸ್ವೇಚ್ಛಾಚಾರಿಗಳಿಗೆ ಮತ್ತಷ್ಟು ಆರಾಮವಾಗಿದೆ.
ಪ್ರಕೃತಿಯಲ್ಲಿ ಎಷ್ಟು ಬೇಕಾದರೆ ಎಂಜಾಯ್ ಮಾಡಲಿ ಆದ್ರ ಅದೇ ಪ್ರಕೃತಿಯನ್ನ ಹಾಳು ಮಾಡುವುದು ಯಾಕೆ ಅನ್ನುವುದು ಮಾತ್ರ ಗೊತ್ತಿಲ್ಲ. ಸ್ತಳೀಯ ನಗರಸಭೆ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸುವ ದುಷ್ಕರ್ಮಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.