Aug 1, 2021, 10:54 AM IST
ಅಳಿವಿನಂಚಿಗೆ ತಲುಪಿದ ಹುಲಿ ಸಂತತಿ ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಚೇತರಿಕೆ ಕಂಡು ಬಂದಿದೆ. ರಾಜ್ಯದ ಅರಣ್ಯ ಇಲಾಖೆಗಳು ಹಮ್ಮಿಕೊಂಡ ಯೋಜನೆಗಳ ಫಲವಾಗಿ ಹುಲಿ ಸಂರಕ್ಷಣೆಯಲ್ಲಿ ವಿಶ್ವದಲ್ಲೇ ಭಾರತ ಮುಂಚೂಣಿಯಲ್ಲಿದ್ದು, ಕರ್ನಾಟಕ ದೇಶದಲ್ಲೇ 2ನೇ ಸ್ಥಾನವನ್ನ ಪಡೆದಿದೆ. ಹಳೇ ಮೈಸೂರು ಭಾಗದಲ್ಲಿ 400ಕ್ಕೂ ಹೆಚ್ಚು ಹುಲಿಗಳು ನೆಲೆ ಕಂಡು ಕೊಂಡಿದೆ.ಅದರಲ್ಲೂ ಗಡಿ ಜಿಲ್ಲೆ ಚಾಮರಾಜನಗರದಲ್ಲಿ 250 ಕ್ಕೂ ಹೆಚ್ಚು ಹುಲಿ ಇದೆ ಅನ್ನೋದೆ ದೊಡ್ಡ ಹೆಮ್ಮೆ.ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ..
ಇತ್ತೀಚೆಗೆ ಮೈಸೂರು ಮೃಗಾಲಯದಲ್ಲಿ ಜಿರಾಫೆ ಮರಿಗಳ ಸಂಖ್ಯೆಯೂ ಹೆಚ್ಚಾಗಿದ್ದು ದೇಶದಲ್ಲೇ ಹೆಚ್ಚು ಜಿರಾಫೆ ಮರಿಗಳು ಹುಟ್ಟಿದ ಮೃಗಾಲಯದವೆಂಬ ಹೆಗ್ಗಳಿಕೆಗೂ ಮೈಸೂರು ಝೂ ಪಾತ್ರವಾಗಿದೆ. ಈಗ ಹುಲಿಗಳ ಸಂತತಿಯೂ ಹೆಚ್ಚಿದ್ದು ಪ್ರಾಣಿ ಪ್ರಿಯರು ಖುಷಿಯಾಗಿದ್ದಾರೆ.