Dec 28, 2020, 4:02 PM IST
ಬೆಂಗಳೂರು (ಡಿ. 28): ಸೇಫ್ ಸಿಟಿ ಟೆಂಡರ್ ವಿಚಾರದಲ್ಲಿ ಐಪಿಎಸ್ ಅಧಿಕಾರಿಗಳಾದ ಡಿ ರೂಪಾ ಹಾಗೂ ಹೇಮಂತ್ ನಿಂಬಾಳ್ಕರ್ ನಡುವಿನ ಜಟಾಪಟಿಗೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದೆ. ಮುಖ್ಯ ಕಾರ್ಯದರ್ಶಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ಎಲ್ಲಾ ಕ್ರಮಗಳನ್ನು ಅವರೇ ನೋಡಿಕೊಳ್ಳುತ್ತಾರೆ' ಎಂದು ಗೃಹ ಸಚಿವ ಬೊಮ್ಮಾಯಿ ಹೇಳಿದ್ಧಾರೆ.
ಸಚಿವ ಸಂಪುಟ ವಿಸ್ತರಣೆ ಮುನ್ನ ಬಂಡಾಯ ಶಮನ; ದಿಟ್ಟ ಹೆಜ್ಜೆ ಇಟ್ಟ ರಾಜಾಹುಲಿ
'ಸುರಕ್ಷಾ ನಗರ' ಮೂರು ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ. ಎರಡು ಬಾರಿ ಟೆಂಡರ್ ರದ್ದಾಗಲು ಕಾರಣವಾದ ದೂರಿಗೆ ನಿಂಬಾಳ್ಕರ್ ಸೂಕ್ತ ಉತ್ತರ ನೀಡಲಿಲ್ಲ. ದೊಡ್ಡ ಮೊತ್ತದ ಟೆಂಡರ್‌ನಲ್ಲಿ ಭ್ರಷ್ಟಾಚಾರ ನಡೆದಿರುವ ಸಾಧ್ಯತೆಗಳಿವೆ. ಸರ್ಕಾರಕ್ಕೆ ಈ ಬಗ್ಗೆ ತಪ್ಪು ಮಾಹಿತಿ ಸಲ್ಲಿಕೆಯಾಗಿದೆ. ಹೇಮಂತ್ ನಿಂಬಾಳ್ಕರ್ ಸರ್ಕಾರದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಡಿ ರೂಪಾ ಆರೋಪಿಸಿದ್ದರು.