ಯಾರ್ಯಾರಿಗೋ ಸೆಕ್ಯುರಿಟಿ ಇರತ್ತೆ, ಲಸಿಕೆ ವ್ಯಾನ್‌ಗೆ ಮಾತ್ರ ಇಲ್ಲ ನೋಡಿ! ಇದೆಂಥಾ ಅವ್ಯವಸ್ಥೆ

Jan 12, 2021, 4:36 PM IST

ಬೆಂಗಳೂರು (ಜ. 12): ಕಡೆಗೂ ರಾಜ್ಯಕ್ಕೆ ಬಂದೇ ಬಿಡ್ತು ಕೊರೊನಾ ಲಸಿಕೆ. ವಿಶೇಷ ವಿಮಾನದಲ್ಲಿ ವ್ಯಾಕ್ಸಿನ್ ಬಂದಿಳಿದಿದೆ.  ಏರ್‌ಪೋರ್ಟ್‌ನಿಂದ ಭದ್ರತೆಯೊಂದಿಗೆ ಆರೋಗ್ಯ ಇಲಾಖೆ ಕಚೇರಿ ತಲುಪಿದೆ. 54 ಬಾಕ್ಸ್ ಗಳಲ್ಲಿ ಲಸಿಕೆಯನ್ನು ತರಲಾಗಿದೆ. ಇದು ಕೇವಲ ಮದ್ದಲ್ಲ, ನಮ್ಮ ಭರವಸೆ ಅಂತಲೇ ಹೇಳಬಹುದು. 

ಕರ್ನಾಟಕಕ್ಕೆ ಬಂದೇ ಬಿಡ್ತು ಲಸಿಕೆ, ಇದು ಬರೀ ಮದ್ದಲ್ಲ, ನಮ್ಮ ಭರವಸೆ!

ಏರ್‌ಪೋರ್ಟ್‌ನಿಂದ ಡಿಪೋವರೆಗೆ ವ್ಯಾಕ್ಸಿನ್ ಸಾಗಿಸಿದ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಯಾರ್ಯಾರಿಗೂ ವಿಐಪಿ ಅಂತ ಬಿಗಿ ಭದ್ರತೆ ಕೊಡಲಾಗುತ್ತೆ, ಜೀರೋ ಟ್ರಾಫಿಕ್ ಮಾಡಲಾಗುತ್ತೆ, ಆದರೆ ವ್ಯಾಕ್ಸಿನ್ ಮಾತ್ರ ಅಬ್ಬೇಪಾರಿ ತರ ಸಾಗಿಸಲಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಡಿಪೋಗೆ ಸಾಗಿಸುವ ವೇಳೆ ಅಚಾತುರ್ಯದಿಂದ ಬಾಕ್ಸ್  ಬಿದ್ದು ಹೋಗುತ್ತದೆ. ಯಾಕಿಷ್ಟು ಬೇಜವಾಬ್ದಾರಿ ಎಂದು ಅಸಮಾಧಾನ ವ್ಯಕ್ತವಾಗಿದೆ