Jan 28, 2022, 4:18 PM IST
ತುಮಕೂರು (ಜ. 28): ಶಿರಾ (Sira) ತಾಲೂಕಿನ ಹುಲಿಕುಂಟೆ ಗ್ರಾಮ ಪಂಚಾಯ್ತಿ ಕಂಪ್ಯೂಟರ್ ಆಪರೇಟರ್‌ಗೆ 2 ವರ್ಷದ ಸಂಬಳ ಸಿಕ್ಕಿರಲಿಲ್ಲವೆಂದು ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಮಾಡಿತ್ತು. ಆಪರೇಟರ್ ಜಯಲಕ್ಷ್ಮಿಗೆ 1 ತಿಂಗಳ ಸಂಬಳ ಮಂಜೂರಾಗಿದೆ.
ಶಿರಾ ತಾಲೂಕಿನ ಹುಲಿಕುಂಟೆ ಗ್ರಾಮ ಪಂಚಾಯ್ತಿಯಲ್ಲಿ ಜಯಲಕ್ಷ್ಮಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಗ್ರಾಪಂ ಅಧ್ಯಕ್ಷ ಹಾಗೂ ಮಗನ ಪ್ರಭಾವದಿಂದ ಒಂದು ವರ್ಷದಿಂದ ವೇತನ ಕೊಡದೇ ತಡೆ ಹಿಡಿಯಲಾಗಿತ್ತು. ಈ ಹಿಂದೆ ಸಾಕಷ್ಟು ಬಾರಿ ಸಚಿವರು, ಡಿಸಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಎಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಬಳಿಕ ದಿಢೀರನೇ ವೇತನ ವಿತರಣೆಯಾಗಿದೆ.