Dec 12, 2020, 6:34 PM IST
ಬಾಗಲಕೋಟೆ/ಬೆಂಗಳೂರು, (ಡಿ.12): ರಾಜ್ಯದಲ್ಲಿ ಎರಡು ದಿನಗಳಿಂದ ಸಾರಿಗೆ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಬಸ್ ಇಲ್ಲದೇ ಪ್ರಯಾಣಿಕರು ಪರದಾಡುವಂತ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಬೇಜವಾಬ್ದಾರಿ ಸವದಿ ಮೇಲೆ ಸಿಎಂ ಗರಂ, ಫುಲ್ ಕ್ಲಾಸ್..!
ಇತ್ತ ಕಾರ್ಯಕರ್ತರ ಸಭೆ ನಿಮಿತ್ತ ಬದಾಮಿಗೆ ಆಗಮಿಸಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಬಸ್ ನಿಲ್ದಾಣದಲ್ಲಿ ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲ ನೀಡಿ, ಅವರ ಮನವಿ ಸ್ವೀಕರಿಸಿದರು. ನಂತರ ಸಭೆಯಲ್ಲಿ ವೇದಿಕೆ ಮೇಲೆ ಕುಳಿತು, ಸಾರಿಗೆ ಸಚಿವ ಲಕ್ಷ್ಮಣ ಸವದಿಗೆ ಕರೆ ಮಾಡಿ, ತಕ್ಷಣವೇ ಸಭೆ ಕರೆದು ಸಮಸ್ಯೆ ಇತ್ಯರ್ಥ ಮಾಡಿ ಎಂದು ಹೇಳಿದರು.