Weekend Curfew: ಪರಿಸ್ಥಿತಿ ಕೈ ಮೀರಿದ್ರೆ ಮತ್ತೆ ಕಠಿಣ ಕ್ರಮಗಳ ಎಚ್ಚರಿಕೆ ಕೊಟ್ಟ ಡಾ. ಸುಧಾಕರ್

Jan 22, 2022, 1:47 PM IST

ಬೆಂಗಳೂರು (ಜ. 22):  ಬಹುಚರ್ಚಿತ ವಾರಾಂತ್ಯದ ಕಫ್ರ್ಯೂ (Weekend Curfew) ತಕ್ಷಣದಿಂದ ಜಾರಿಗೆ ಬರುವಂತೆ ನಾಡಿನಾದ್ಯಂತ ರದ್ದುಗೊಳಿಸಲಾಗಿದೆ.  ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಶಾಲಾ-ಕಾಲೇಜು ತರಗತಿ ಆರಂಭಕ್ಕೆ ಅನುಮತಿ ನೀಡಲಾಗಿದೆ. ಆದರೆ, ಹಾಲಿ ಜಾರಿಯಲ್ಲಿರುವ ರಾತ್ರಿ ಕಫ್ರ್ಯೂ ಮತ್ತು ಚಿತ್ರಮಂದಿರ, ಪಬ್‌, ಬಾರ್‌, ಹೋಟೆಲ್‌ ಮತ್ತಿತರ ಸಾರ್ವಜನಿಕ ಸ್ಥಳಗಳ ಪ್ರವೇಶಕ್ಕೆ ಸಾಮರ್ಥ್ಯದ ಶೇ.50ರಷ್ಟು ಮಿತಿ. ರಾರ‍ಯಲಿ, ಪ್ರತಿಭಟನೆ ನಿಷೇಧ ಸೇರಿದಂತೆ ಉಳಿದೆಲ್ಲಾ ನಿರ್ಬಂಧ ಯಥಾವತ್‌ ಮುಂದುವರಿಕೆಯಾಗಿದೆ. 

'ಕೊರೊನಾ ಸೋಂಕು ಹೆಚ್ಚಾಗುತ್ತಿದ್ದರೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ. ಆಸ್ಪತ್ರೆ ಸೇರುವವರ ಸಂಖ್ಯೆ ಜಾಸ್ತಿಯಾದರೆ ಬೇರೆ ದಾರಿ ಇಲ್ಲ. ಪರಿಸ್ಥಿತಿ ಕೈ ಮೀರಿದರೆ ಕಠಿಣ ಕ್ರಮಗಳನ್ನು ಅನಿವಾರ್ಯವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಜನರು ಜವಾಬ್ದಾರಿಯುತವಾಗಿ ವರ್ತಿಸಬೇಕು. ಸಭೆ ಸಮಾರಂಭಗಳನ್ನು ಸದ್ಯಕ್ಕೆ ಆಯೋಜಿಸಬೇಡಿ, ಎಚ್ಚರಿಕೆಯಿಂದಿರಿ' ಎಂದು ಡಾ. ಸುಧಾಕರ್ ಹೇಳಿದ್ದಾರೆ.