ಎಂಟಿಬಿ ಆಪ್ತನಿಂದ ಬೆದರಿಕೆ; ಹೊಸಕೋಟೆ THO ನಿಗೂಢ ನಾಪತ್ತೆ, ಏನಿದು ಅಸಲಿ ಕತೆ?

Dec 18, 2020, 1:37 PM IST

ಬೆಂಗಳೂರು (ಡಿ. 18): ನಿಗೂಢವಾಗಿ ನಾಪತ್ತೆಯಾಗಿದ್ದ ಹೊಸಕೋಟೆ THO ಮಂಜುನಾಥ್ 3 ದಿನಗಳ ಬಳಿಕ ಪತ್ತೆಯಾಗಿದ್ದಾರೆ. ಮಾಜಿ ಸಚಿವ ಎಂಟಿಬಿ ನಾಗರಾಜ್ ಆಪ್ತ ಮಂಜುನಾಥ್‌ಗೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಹೀಗಾಗಿಯೇ ಮಂಜುನಾಥ್ ಮನೆಬಿಟ್ಟು ಹೋಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. 

ಗೋಲ್ಮಾಲ್ ಗುರುವಿನ ನೌಟಂಕಿ ಆಟ ಒಂದೆರಡಲ್ಲ..!

ಡಿ. 10 ರಂದು ಮಂಜುನಾಥ್ ಅವರು ನಕಲಿ ಕ್ಲಿನಿಕ್‌ಗಳ ಮೇಲೆ ದಾಳಿ ಮಾಡುತ್ತಾರೆ. ಕಾನೂನು ಕ್ರಮಕ್ಕೆ ಮುಂದಾಗುತ್ತಾರೆ. ಈ ತನಿಖೆಯನ್ನು ಕೈ ಬಿಡುವಂತೆ ಎಂಟಿಬಿ ನಾಗರಾಜ್ ಆಪ್ತ ಜಯರಾಜ್ ಧಮ್ಕಿ ಹಾಕಿದ್ದು, ಹೀಗಾಗಿಯೇ ನಾಪತ್ತೆಯಾಗಿರುವ ಸಾಧ್ಯತೆ ಇದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ.