News Hour With Pratap Simha: ರಾಜ್ಯದ ಹಿತಾಸಕ್ತಿಯ ಪರವಾಗಿ ಬಿಜೆಪಿ ಸಂಸದರು ನಿಲ್ಲುವುದಿಲ್ಲ ಏಕೆ?

Jun 29, 2022, 1:57 PM IST

ಬೆಂಗಳೂರು (ಜೂ. 29): ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ  ನ್ಯೂಸ್‌ ಅವರ್‌ ಸ್ಪೇಷಲ್‌ನಲ್ಲಿ (News Hour Special) ಸಮಾಜದ ಬೇರೆ ಬೇರೆ ಕ್ಷೇತ್ರಗಳನ್ನು ಪ್ರತಿನಿಧಿಸುವ ಜನರ ಪ್ರಶ್ನೆಗಳಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha)ಉತ್ತರಿಸಿದ್ದಾರೆ. ಅಭಿವೃದ್ಧಿಯ ವಿಷಯದಲ್ಲಿ ರಾಜ್ಯದ ಸಂಸದರ ಪೈಕಿ ಅತಿ ಹೆಚ್ಚು ಚರ್ಚೆಯಾಗುವ ಹೆಸರು ಸಂಸದ ಪ್ರತಾಪ್‌ ಸಿಂಹ್‌ ಅವರದ್ದು. ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯನ್ನು ಸಮರ್ಪಕವಾಗಿ ಬಳಸಿಕೊಂಡವರ ಪೈಕಿ ಪ್ರತಾಪ್‌ ಸಿಂಹ ಮೊದಲ ಸ್ಥಾನದಲ್ಲಿದ್ದಾರೆ. 

ಅಭಿವೃದ್ಧಿ ಕಾರಣಕ್ಕೆ ವಿರೋಧ ಪಕ್ಷಗಳ ಶಾಸಕರ- ಸಂಸದರ, ಅಷ್ಟೇ ಅಲ್ಲ ತಮ್ಮದೇ ಪಕ್ಷದ ವಿರೋಧವನ್ನು ಕಟ್ಟಿಕೊಂಡವರು ಪ್ರತಾಪ್‌ ಸಿಂಹ. 9500 ಕೋಟಿ ವೆಚ್ಚದ ಬೆಂಗಳೂರು-ಮೈಸೂರಿ ದಶಪಥ ಹೆದ್ದಾರಿ ಕನಸು ನನಸಾಗುತ್ತಿದೆ. ಈ ಯೋಜನೆ ಜಾರಿಗೊಳಿಸುವಲ್ಲಿ ಪ್ರತಾಪ್‌ ಸಿಂಹ ಅವರ ನಿರಂತರ ಪರಿಶ್ರಮ ಇದೆ. ಬೆಂಗಳೂರಿಗೆ ಸರಿಸಾಟಿಯಾಗಿ ಮೈಸೂರನ್ನು ಕಟ್ಟಿ ಬೆಳೆಸುವ ದೂರದೃಷ್ಟಿ ಹೊಂದಿದ್ದಾರೆ ಪ್ರತಾಪ್‌ ಸಿಂಹ. ಪ್ರತಾಪ್‌ ಸಿಂಹ್‌ ಅಭಿವೃದ್ಧಿ ಕಾರ್ಯವನ್ನು ಪ್ರಧಾನಿ ಮೋದಿ ಕೂಡ ಶ್ಲಾಘಿಸಿದ್ದಾರೆ.   

ಅಭಿವೃದ್ಧಿ ವಿಷಯ ಬಿಟ್ರೆ, ಪ್ರತಾಪ್‌ ಸಿಂಹ ಹೆಚ್ಚು ಚರ್ಚೆಗೀಡಾಗೋದು ತಮ್ಮ ನೇರವಾದ ಮಾತುಗಳಿಂದ. ಪಕ್ಷದ ಸೈದ್ಧಾಂತಿಕ ನಿಲುವುಗಳನ್ನು ಹೇಳುವಾಗಲೂ ಹಿಂದೆ ಮುಂದೆ ನೋಡೋದಿಲ್ಲ. ಇದೇ ಕಾರಣಕ್ಕೆ ಅವರಿಗೆ ರಾಜಕಾರಣದಲ್ಲಿ ವಿರೋಧಿಗಳು ಜಾಸ್ತಿ. ನ್ಯೂಸ್‌ ಅವರ್‌ ಸ್ಪೇಷಲ್‌ನಲ್ಲಿ ಅಭಿವೃದ್ಧಿ ವಿಷಯ, ಸೈದ್ಧಾಂತಿಕ ವಿಚಾರ, ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರತಾಪ್‌ ಸಿಂಹ ಮಾತನಾಡಿದ್ದಾರೆ.  

ಇದನ್ನೂ ನೋಡಿ: ಈಶ್ವರಪ್ಪ ರಾಜಕೀಯ ಜೀವನ ಮುಗಿದೇ ಹೋಯ್ತಾ? ನೇರ ಪ್ರಶ್ನೆಗಳಿಗೆ ಈಶ್ವರಪ್ಪ ನೇರಾ ನೇರ ಉತ್ತರ

ಸಂಸದ ಪ್ರತಾಪ್ ಸಿಂಹ ಮುಸ್ಲಿಮರ ವಿರೋಧಿಯಾ? ಮುಸ್ಲಿಮರ ಜತೆ ತಿಕ್ಕಾಟ ಬಿಜೆಪಿಯವರಿಗಾ? ಎಲ್ಲ ಹಿಂದೂಗಳಿಗಾ? ಪ್ರತಾಪ್ ಸಿಂಹ ಮಸೀದಿಗೆ ಹೋಗಿ ಮುಸ್ಲಿಮರು ನಮ್ಮವರು ಅನ್ನಲ್ಲವಂತೆ!  ಈ ದೇಶದ ಮುಸ್ಲಿಮರ ನಿಷ್ಠೆ ಯಾರಿಗೆ? ಈ ಪ್ರಶ್ನೆ ಕೇಳಿದ್ದೇಕೆ ಪ್ರತಾಪ್ ಸಿಂಹ? ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರನಾ? ಮಕ್ಕಳನ್ನ ಅಡವಿಟ್ಟಿದ್ದು ಸ್ವಾರ್ಥಕ್ಕಾ?  ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಭ್ರಷ್ಟಾಚಾರ ಕಡಿಮೆಯಾಯ್ತಾ? ದಲಿತ ಮುಖ್ಯಮಂತ್ರಿ ಚರ್ಚೆ ವಿಷಯ ಬಿಜೆಪಿಯಲ್ಲಿಲ್ಲ ಯಾಕೆ? ಸುಮಲತಾ ವಿರುದ್ಧ ಪ್ರತಾಪ್ ಸಿಂಹ ತಿಕ್ಕಾಟ ಯಾಕೆ? ರಾಜ್ಯದ ಹಿತಾಸಕ್ತಿಯ ಪರವಾಗಿ ಬಿಜೆಪಿ ಸಂಸದರು ನಿಲ್ಲುವುದಿಲ್ಲವಾ? ಪ್ರತಾಪ್ ಸಿಂಹ ದೃಷ್ಟಿಯಲ್ಲಿ ರಾಜಕೀಯವೆಂದರೇನು?  ಈ ಎಲ್ಲ  ಪ್ರಶ್ನೆಗಳಿಗೆ  ಹೈವೋಲ್ಟೇಜ್ ಸಂವಾದಲ್ಲಿ ಸಂಸದ ಪ್ರತಾಪ್ ಸಿಂಹ ಉತ್ತರಿಸಿದ್ದಾರೆ.