Sep 10, 2021, 11:53 AM IST
ಬೆಂಗಳೂರು (ಸೆ. 10): ಭಕ್ತರೊಬ್ಬರು ಮಾಳಿಂಗರಾಯನ ಗದ್ದುಗೆ ಮೇಲಿದ್ದ ತೆಂಗಿನ ಕಾಯಿಯನ್ನು ಬರೋಬ್ಬರಿ 6.5 ಲಕ್ಷ ರೂ ಕೊಟ್ಟು ಕೊಂಡುಕೊಂಡಿದ್ದಾರೆ.
ಬಾಗಲಕೋಟೆ ಜಮಖಂಡಿ ತಾಲೂಕಿನ ಚಿಕ್ಕನೆಕಿ ಗ್ರಾಮದಲ್ಲಿ ಮಾಳಿಂಗರಾಯನ ಗದ್ದುಗೆ ಮೇಲಿದ್ದ ತೆಂಗಿನ ಕಾಯಿಯನ್ನು ಹರಾಜು ಮಾಡಲಾಗಿತ್ತು. ಈ ವೇಳೆ ಮಹಾವೀರ ಹರಕೆ ಎಂಬುವವರು 6.5 ಲಕ್ಷ ರೂ ಹರಾಜು ಕೂಗಿ ತೆಂಗಿನ ಕಾಯಿ ಪಡೆದಿದ್ದಾರೆ. ಮಾಳಿಂಗರಾಯನ ಹರಾಜು ಇತಿಹಾಸದಲ್ಲಿ ಇದೇ ಮೊದಲ ಬಾರಿ ಇಷ್ಟೊಂದು ದುಬಾರಿ ಮೊತ್ತಕ್ಕೆ ಹರಾಜಾಗಿದೆ.