ಕ್ರಿಸ್‌ಮಸ್, ವರ್ಷಾಚರಣೆ ಸಂಭ್ರಮಕ್ಕೆ ಬ್ರೇಕ್; ನೋ ಶೇಕ್‌ಹ್ಯಾಂಡ್, ನೋ ಹಗ್ಗಿಂಗ್‌!

Dec 18, 2020, 1:17 PM IST

ಬೆಂಗಳೂರು (ಡಿ. 18): ಕೊರೊನಾ 2 ನೇ ಅಲೆ ಭೀತಿ ಹಿನ್ನಲೆಯಲ್ಲಿ 2021 ರ ವರ್ಷಾಚರಣೆಗೆ ಹಾಗೂ ಕ್ರಿಸ್‌ಮಸ್ ಪಾರ್ಟಿಗೆ ಬ್ರೇಕ್ ಬಿದ್ದಿದೆ. ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಜನ ಸೇರುವಂತಿಲ್ಲ. ಹಸ್ತಲಾಘವ, ಆಲಿಂಗನ  ಡ್ಯಾನ್ಸ್, ಡಿಜೆ ಆಯೋಜಿಸುವಂತಿಲ್ಲ. ಹಸಿರು ಪಟಾಕಿಗಳನ್ನು ಬಿಟ್ಟು ಬೇರೆ ಪಟಾಕಿಗಳನ್ನು ಸಿಡಿಸುವಂತಿಲ್ಲ ಎಂಬುದು ಸೇರಿದಂತೆ 11 ಅಂಶಗಳ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ.

ವೇಶ್ಯಾವಾಟಿಕೆಯೂ ವೃತ್ತಿ ಎಂದ ಅಮೆರಿಕಾ ಗವರ್ನರ್, ಐಟಿ ರಿಟರ್ನ್ಸ್‌ಗೆ ಹೊಸ ಸೂತ್ರ

ನಿಯಮ ಉಲ್ಲಂಘಿಸಿದರೆ ವಿಪತ್ತು ನಿರ್ವಹಣಾ ಕಾಯ್ದೆ- 2005 ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 188 ಅಡಿಯಲ್ಲಿ ಶಿಸ್ತಿನ ಅಥವಾ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.