ನಿಮಗಿಂತ ಹೆಚ್ಚು ಕಾಳಜಿ ಪ್ರಧಾನಿಗೆ ರೈತರ ಮೇಲಿದೆ, ಪ್ರತಿಭಟನೆ ಕೈ ಬಿಡಿ: ಸಿಎಂ ಮನವಿ

Dec 9, 2020, 1:19 PM IST

ಬೆಂಗಳೂರು (ಡಿ. 09): ಕೃಷಿ ಕಾಯ್ದೆ ವಿರೋಧಿಸಿ ರೈತರ ಪ್ರತಿಭಟನೆ ಮುಂದುವರೆದಿದೆ. ಬೆಂಗಳೂರಿನಲ್ಲಿ ಇಂದು ರೈತ ಸಂಘಟನೆಗಳು  ಪ್ರತಿಭಟನೆ ನಡೆಸುತ್ತಿವೆ.ಬಾರುಕೋಲು ಚಳುವಳಿ ಮಾಡಲು ಮುಂದಾಗಿದ್ದಾರೆ. 

''ಬಾರುಕೋಲು ಚಳುವಳಿ ಕೈ ಬಿಡಿ. ಜನರಿಗೆ ತೊಂದರೆ ಕೊಡುವ ಕೆಲಸ ಮಾಡಬೇಡಿ. ನಿಮಗಿಂತ ಹೆಚ್ಚಿನ ಕಾಳಜಿ ಪ್ರಧಾನಿಯವರಿಗೂ ಇದೆ' ಎಂದು ಪ್ರತಿಭಟನಾಕಾರರಿಗೆ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ. 

ಬೆಂಗಳೂರಿನ ಜನರಿಗೆ ಇಂದು ಟ್ರಾಫಿಕ್ ಬಿಸಿ; ವಾಹನ ಸವಾರರೇ ಈ ಮಾರ್ಗಗಳಲ್ಲಿ ಹೋಗಬೇಡಿ

'ನಿನ್ನೆಯೂ ಭಾರತ್ ಬಂದ್ ಮಾಡಿದ್ದೀರಿ. ಪ್ರತಿದಿನವೂ ಪ್ರತಿಭಟನೆ ಮಾಡೋದು ಎಷ್ಟು ಸರಿ? ಜನರಿಗೆ ತೊಂದರೆ ಕೊಡಬೇಡಿ. ಕುಳಿತು ಮಾತನಾಡಿ ಸಮಸ್ಯೆಯನ್ನು  ಬಗೆಹರಿಸಿಕೊಳ್ಳೋಣ. ಪ್ರತಿಭಟನೆಯನ್ನು ಕೈ ಬಿಡಿ' ಎಂದು ಬಿಎಸ್‌ವೈ ಮನವಿ ಮಾಡಿದ್ಧಾರೆ.