ಕೊರೋನಾ ಎಕ್ಸ್‌ಪ್ರೆಸ್: ಕೇರಳದಲ್ಲಿ SSLC ಪರೀಕ್ಷೆ ಆರಂಭ

May 26, 2020, 12:45 PM IST

ತಿರುವನಂತಪುರಂ(ಮೇ.26): ಕೇರಳದಲ್ಲಿ ಇಂದಿನಿಂದ(ಮೇ.29) SSLC ಪರೀಕ್ಷೆ ಆರಂಭವಾಗಿದೆ. ಆರೋಗ್ಯ ತಪಾಸಣೆಯ ಬಳಿಕ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡಲಾಗಿದೆ. 4 ದಿನಗಳ ಕಾಲ SSLC ಪರೀಕ್ಷೆ ನಡೆಯಲಿದೆ.

ಇನ್ನು ಕ್ವಾರಂಟೈನ್‌ ಕೇಂದ್ರದಿಂದ ಹೊರಬರುವವರಿಗೆ ಕಲಬುರಗಿ ಜಿಲ್ಲಾಡಳಿತ ಮುಂದಾಗಿದೆ. ಕ್ವಾರಂಟೈನ್ ನಿಯಮ ಉಲ್ಲಂಘಿಸುವವರ ವಿರುದ್ಧ FIR ದಾಖಲಿಸಲು ಕಲಬುರಗಿ ಜಿಲ್ಲಾಧಿಕಾರಿ ಖಡಕ್ ಆದೇಶ ನೀಡಿದ್ದಾರೆ.

ಸಾಮಾಜಿಕ ಅಂತರವಿಲ್ಲ: BMTC ಬಸ್ ಹತ್ತಲು ಜನರ ನೂಕು ನುಗ್ಗಲು..!

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ವಾಕಿಂಗ್ ಮಾಡಲು ಅನುಮತಿ ನೀಡಲಾಗಿದೆ. ಮಲೆಮಾದೇಶ್ವರ ದೇವಸ್ಥಾನದಲ್ಲಿ 15 ಕೋಟಿ ರುಪಾಯಿ ನಷ್ಟವಾಗಿದೆ. ಇನ್ನಷ್ಟು ಸುದ್ದಿಗಳು ಕೊರೋನಾ ಎಕ್ಸ್‌ಪ್ರೆಸ್‌ನಲ್ಲಿ.