Oct 18, 2021, 5:47 PM IST
ಬೆಂಗಳೂರು (ಅ. 18): ಪ್ರಧಾನಿ ಮೋದಿ ಅಚ್ಛೇ ದಿನ್ ಆಯೇಗಾ ಅಂತಾರಲ್ಲಾ.? ಎಲ್ಲಪ್ಪಾ ಅಚ್ಛೇ ದಿನ್..? ಸ್ವಾತಂತ್ರ ಬಂದ ಮೇಲೆ ದೇಶದ ಸಾಲ ಹೆಚ್ಚಾಗಿದೆ. ಬೊಕ್ಕಸದಲ್ಲಿ ದುಡ್ಡೇ ಇಲ್ಲದಂತಾಗಿದೆ. ಆದರೂ ಸಬ್ ಕಾ ಸಾಥ್, ಸಬ್ ಕ ವಿಕಾಸ್ ಅಂತಾರೆ. ಯುವ ಜನತೆಗೆ ಉದ್ಯೋಗ ಕೊಡುವುದಿರಲಿ, ಇರುವ ಉದ್ಯೋಗವನ್ನೇ ಕಿತ್ತುಕೊಂಡಿದ್ಧಾರೆ. ದೇಶವನ್ನು ಹಾಳು ಮಾಡಿದ್ದಾರೆ' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಹೆಬ್ಬೆಟ್ಟು ಗಿರಾಕಿ ಮೋದಿಯಿಂದ ದೇಶ ನರಳುತ್ತಿದೆ: ಕಾಂಗ್ರೆಸ್ ಲೇವಡಿ
'ನಾನು 50 ವರ್ಷದಿಂದ ನೋಡ್ತಾ ಇದ್ದೀನಿ. ಇಷ್ಟೊಂದು ಸುಳ್ಳು ಹೇಳುವ ಪ್ರಧಾನಿ ಯಾರೂ ಇರಲಿಲ್ಲ. ಬಿಜೆಪಿಯವರು ಕರ್ನಾಟಕದಲ್ಲಿ ಬದುಕಿರೋದೇ ನರೇಂದ್ರ ಮೋದಿ ಹೆಸರು ಹೇಳಿಕೊಂಡು. ಬಿಜೆಪಿಯವರು ಸುಳ್ಳಿನ ಫ್ಯಾಕ್ಟರಿಯನ್ನೇ ತೆರೆದಿದ್ದಾರೆ' ಎಂದು ಟೀಕಿಸಿದರು.