Feb 23, 2022, 11:11 AM IST
ಶಿವಮೊಗ್ಗ (ಫೆ. 23): ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ ಹರ್ಷ ಕುಟುಂಬಕ್ಕೆ ರಾಜ್ಯಾದ್ಯಂತ ನೆರವು ಹರಿದು ಬರುತ್ತಿದೆ. ಈ ವರೆಗೂ 37 ಲಕ್ಷ ನೆರವು ಹರಿದು ಬಂದಿದೆ.
ಭರತ್ ಶೆಟ್ಟಿಅವರು ತನ್ನ ತಿಂಗಳ ವೇತನವನ್ನು ಕೊಡುಗೆಯಾಗಿ ನೀಡುತ್ತೇನೆ ಎಂದು ಪ್ರಕಟಿಸಿದ್ದಾರೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ವೈಯಕ್ತಿಕ ನೆಲೆಯಲ್ಲಿ ಅವರ ಬ್ಯಾಂಕ್ ಖಾತೆಯಿಂದ .1 ಲಕ್ಷವನ್ನು ಹರ್ಷ ಅವರ ಕುಟುಂಬದ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ. ಇನ್ನು ಮಂಗಳೂರು ದಕ್ಷಿಣ ಕ್ಷೇತ್ರದ ವೇದವ್ಯಾಸ್ ಕಾವತ್ ಅವರು 1 ಲಕ್ಷ ನೀಡುವುದಾಗಿ ಘೋಷಿಸಿದ್ದಾರೆ. ಬೈಂದೂರು ಶಾಸಕ ಸುಕುಮಾರ ಶೆಟ್ಟಿಅವರು ಮೃತ ಹರ್ಷ ಅವರ ತಾಯಿಯ ಖಾತೆಗೆ .1 ಲಕ್ಷ ಜಮಾ ಮಾಡಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್‌ರಿಂದ .1 ಲಕ್ಷ ನೆರವು ಸಿಕ್ಕಿದೆ.ಶಾಸಕರಾದ ರೇಣುಕಾಚಾರ್ಯ .2 ಲಕ್ಷ, ಅರವಿಂದ ಲಿಂಬಾವಳಿ .1 ಲಕ್ಷ ನೀಡುವುದಾಗಿ ಘೋಷಿಸಿದ್ದಾರೆ.