Shivamogga: ನಗರದಲ್ಲಿ ಹೈ ಅಲರ್ಟ್, ಇಂದು ಹೇಗಿದೆ ಶಿವಮೊಗ್ಗ.? ಗ್ರೌಂಡ್ ರಿಪೋರ್ಟ್

Feb 22, 2022, 10:40 AM IST

ಬೆಂಗಳೂರು (ಫೆ. 22): ಬಜರಂಗದಳ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ ಹರ್ಷನನ್ನು ಆರು ದುಷ್ಕರ್ಮಿಗಳು ಮನೆ ಸಮೀಪ ಅಟ್ಟಾಡಿಸಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡಿದ್ದ ಒಂದು ಕೋಮಿನ ಮಂದಿ ರಾತ್ರಿಯೇ ಕೆಲವೆಡೆ ಕಲ್ಲು ತೂರಿದ್ದಲ್ಲದೆ, ಒಂದಷ್ಟುವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದರು. 

Shivamogga Riots: ವ್ಯಾಪಕ ಹಿಂಸೆ, 2 ದಿನ ನಿಷೇಧಾಜ್ಞೆ ವಿಸ್ತರಣೆ, ಶಾಲಾ-ಕಾಲೇಜುಗಳಿಗೂ ರಜೆ

ಮೃತದೇಹ ಸೀಗೆಹಟ್ಟಿಯಲ್ಲಿರುವ ಹರ್ಷನ ಮನೆ ತಲುಪುವವರೆಗೂ ಸುಮಾರು ಒಂದು ಗಂಟೆ ಈ ಹಿಂಸಾಚಾರ, ಕಲ್ಲುತೂರಾಟ ಮುಂದುವರಿಯಿತು. ಈ ವೇಳೆ ಒಂದು ಕೋಮಿನವರು ಮಚ್ಚು, ಲಾಂಗ್‌, ದೊಣ್ಣೆ ಹಿಡಿದು ಶಕ್ತಿ ಪ್ರದರ್ಶಿಸಿದ್ದರಿಂದ ಪರಸ್ಪರ ಹಲ್ಲೆ, ಪ್ರತಿ ಹಲ್ಲೆ ನಡೆಸುವ ಆತಂಕವೂ ನಿರ್ಮಾಣವಾಗಿತ್ತು. ಇನ್ನೂ ಎರಡು ದಿನ ನಿಷೇಧಾಜ್ಞೆಯನ್ನು ಮುಂದುವರೆಸಲಾಗಿದೆ. ಇಂದು ಶಿವಮೊಗ್ಗ ಹೇಗಿದೆ..? ಜನ ಏನಂತಾರೆ..? ಗ್ರೌಂಡ್ ರಿಪೋರ್ಟ್.