Shivamogga: ಸುವರ್ಣನ್ಯೂಸ್‌ಗೆ ಧನ್ಯವಾದ ತಿಳಿಸಿದ ಆಜಾದ್ ನಗರದ ಜನತೆ

Feb 22, 2022, 3:03 PM IST

ಬೆಂಗಳೂರು (ಫೆ. 22): ಬಜರಂಗದಳ ಕಾರ್ಯಕರ್ತ ಹರ್ಷ ಎಂಬಾತನ ಬರ್ಬರ ಹತ್ಯೆ ಹಿನ್ನೆಲೆಯಲ್ಲಿ ಇಡೀ ಶಿವಮೊಗ್ಗ ನಗರ ಸೋಮವಾರ ಹೊತ್ತಿ ಉರಿದಿದೆ. ದಿನವಿಡೀ ಉದ್ರಿಕ್ತ ಗುಂಪುಗಳು ಕಂಡ ಕಂಡಲ್ಲಿ ಆಸ್ತಿಪಾಸ್ತಿಗಳ ಮೇಲೆ ಕಲ್ಲು ತೂರಿ, ವಾಹನಗಳು, ಅಂಗಡಿಗಳಿಗೆ ಬೆಂಕಿ ಹಚ್ಚುವ ಮೂಲಕ ಹಿಂಸಾಚಾರಕ್ಕಿಳಿದಿದ್ದು, ಈ ವೇಳೆ 25ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ನಿಷೇಧಾಜ್ಞೆ ನಡುವೆಯೇ ನಡೆದ ಈ ಭಾರೀ ಹಿಂಸಾಚಾರ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ.

ಅಂತಿಮ ಯಾತ್ರೆ ವೇಳೆ ಅಜಾದ್ ನಗರದಲ್ಲಿ ಕಲ್ಲು ತೂರಾಟ, ಗಲಾಟೆಯಾಗಿತ್ತು. ಇಂದು ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ತಣ್ಣಗಾಗಿದೆ. ಜನ ಜೀವನ ಸಹಜ ಸ್ಥಿತಿಗೆ ಬಂದಿದೆ. ಆಜಾದ್ ನಗರಕ್ಕೆ ನೀವು ಸಹಾಯ ಮಾಡಿದ್ದೀರಿ. ನಾವು ನೆಮ್ಮದಿಯಾಗಿರಲು ನೀವೇ ಕಾರಣ' ಎಂದು ಇಲ್ಲಿನ ಜನ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.