May 11, 2020, 7:12 PM IST
ಬೆಂಗಳೂರು (ಮೇ. 11): ಮುಖ್ಯಮಂತ್ರಿಗಳ ತವರು ಜಿಲ್ಲೆ, ಕಳೆದ 47 ದಿನಗಳಿಂದ ಹಸಿರು ವಲಯ ಎಂಬ ಹೆಗ್ಗಳಿಕೆಯಲ್ಲಿಯೇ ಇದ್ದ ಘಟ್ಟನಗರಿ ಇದೀಗ ಒಂದೇ ಬಾರಿಗೆ ಬೆಚ್ಚಿ ಬಿದ್ದಿದೆ. ಇಡೀ ದೇಶವನ್ನು ಕಾಡಿದ ತಬ್ಲೀಘಿಗಳು ಇದೀಗ ಮಲೆನಾಡಿಗೂ ಸೋಂಕು ತಗುಲಿಸಿದ್ದಾರೆ. ಅಹ್ಮದಾಬಾದಿನಿಂದ ತಬ್ಲೀಘಿಗಳಾಗಿ ತವರಿಗೆ ಮರಳಿದ 8 ಮಂದಿ ಕೊರೋನಾ ಸೋಂಕನ್ನು ತಂದಿದ್ದಾರೆ.
ಲಾಕ್‌ಡೌನ್ ಸಡಿಲ: ಸಂಚಾರಕ್ಕೆ ಮುಕ್ತ ಅವಕಾಶ, ಕಾಫಿನಾಡು ಶೇಕ್ ಶೇಕ್!
ಶನಿವಾರವರಷ್ಟೇ ಅಹ್ಮದಾಬಾದಿನಿಂದ ಬಸ್ಸೊಂದರಲ್ಲಿ ಇಲ್ಲಿಗೆ ಆಗಮಿಸಿದ್ದ 9 ಮಂದಿಯನ್ನು ಪ್ರತ್ಯೇಕವಾಗಿ ಕ್ವಾರಂಟೈನ್‌ನಲ್ಲಿ ಇರಿಸಿ ತಪಾಸಣೆಗೆ ಒಳಪಡಿಸಲಾಗಿತ್ತು. ಇಂದು ಮುಂಜಾನೆ ಇವರಲ್ಲಿ 8 ಮಂದಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಇವರಲ್ಲಿ 7 ಮಂದಿ ಶಿಕಾರಿಪುರದವರಾಗಿದ್ದರೆ, ಓರ್ವರು ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನವರಾಗಿದ್ದರೆ.
'ನೀವು ಹೋದ್ರೆ ಕೊರೋನಾ ಬರುತ್ತೆ' ಬಸ್‌ನಲ್ಲಿಯೇ ಮಹಿಳೆಯರ ಮೇಲೆ ಹಲ್ಲೆ'