Dec 22, 2021, 11:56 AM IST
ಬೆಂಗಳೂರು (ಡಿ. 22): ಸೊಕ್ಕು ಮುರಿದರೂ ಶಿವಸೇನೆ (Shivasene) ಗೂಂಡಾಗಿರಿ ನಿಲ್ಲುತ್ತಿಲ್ಲ. ಈಗ ಕರ್ನಾಟಕದ ಗಡಿ ಕಾಗವಾಡಕ್ಕೆ (Kagavada) ನುಗ್ಗುತ್ತೇವೆ. ಪ್ರತಿಭಟಿಸುತ್ತೇವೆ ಎಂದಿದೆ ಶಿವಸೇನೆ. ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ಹಲ್ಲೆ, ವಾಹನಗಳ ಮೇಲೆ ಕಲ್ಲು ತೂರಾಟ ಮುಂದುವರೆದಿದೆ. ಕನ್ನಡ ಧ್ವಜಕ್ಕೆ ಮತ್ತೆ ಬೆಂಕಿ ಹಚ್ಚಿದೆ. ಕರ್ನಾಟಕ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.
Anti Conversion Bill: ವಿರೋಧದ ನಡುವೆಯೂ ಮತಾಂತರ ನಿಷೇಧ ಮಸೂದೆ ಮಂಡನೆ, ನಿಲ್ಲದ ಎಂಇಎಸ್ ಗೂಂಡಾಗಿರಿ
ಇತ್ತ ಬೆಂಗಳೂರಿನಲ್ಲಿ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ, ಕನ್ನಡ ಬಾವುಟ ಸುಟ್ಟಎಂಇಎಸ್, ಶಿವಸೇನೆ ಸಂಘಟನೆ ಕಾರ್ಯಕರ್ತರನ್ನು ಗಡಿಪಾರು ಮಾಡಬೇಕು ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.