Apr 30, 2022, 11:15 AM IST
ಮೈಸೂರು (ಏ. 30): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MOODA) ಎದುರು ನಿವೃತ್ತ ಅಧಿಕಾರಿಯೊಬ್ಬರು ಬೂಟ್ ಪಾಲೀಶ್ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟಿಸಿದ್ದಾರೆ. ಪಾಲಿಕೆ ಆಯುಕ್ತ ನಟೇಶ್ ವಿರುದ್ಧ ಆರೋಪಿಸಿರುವ ನಟರಾಜ್, ಆಯುಕ್ತರು ಕಮಿಷನ್ ಆಸೆಗಾಗಿ ಪಾಲಿಕೆ ವ್ಯಾಪ್ತಿಗೆ ಮೀರಿದ ಕಾಮಗಾರಿಗೆ ಕೈ ಹಾಕುತ್ತಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಮೂಡಾಗೆ ಸಂಪೂರ್ಣ ನಷ್ಟವಾಗಿದೆ. ಆಯುಕ್ತ ನಟೇಶ್ರನ್ನು ವರ್ಗಾವಣೆ ಮಾಡಿ ಎಂದು ಒತ್ತಾಯಿಸಿದ್ದಾರೆ.