ಈದ್ ಹಬ್ಬದ ನೆಪದಲ್ಲಿ ಮತಾಂಧರ ಹುಚ್ಚಾಟ ನಡೆಯಿತಾ..? ಮತಾಂಧರ ಕೈಗೆ ಸಿಕ್ಕನಾ ಮತ್ತೊಬ್ಬ ಹೊಸ ಹೀರೋ.. ?

Oct 3, 2023, 2:40 PM IST

ಕೋಮುಸೂಕ್ಷ್ಮ ನಗರ ಶಿವಮೊಗ್ಗದಲ್ಲಿ ಮತ್ತೆ ಗಲಾಟೆ ಶುರುವಾಗಿದೆ. ಶಿವಮೊಗ್ಗದಲ್ಲಿ(Shivamogga) ಈದ್ ಮಿಲಾದ್ ಮೆರವಣಿಗೆ (Eid procession)ಸಂದರ್ಭದಲ್ಲಿ ಕಲ್ಲು ತೂರಾಟ(Stone pelting) ನಡೆದಿದೆ. ದಾಂಧಲೆ ಜೋರಾಗುತ್ತಿದ್ದಂತೆ ತಕ್ಷಣ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಕಲ್ಲು ತೂರಿದವರನ್ನು ಅರೆಸ್ಟ್ ಮಾಡಲಾಗಿದೆ. ಈಗ ಗಲಾಟೆ ನಿಂತಿದೆ. ನಿಮಗೆಲ್ಲ ಇದಿಷ್ಟೆ ಗೊತ್ತು. ಆದ್ರೆ ನಿನ್ನ ಕಲ್ಲು ತೂರಿದ್ದರ ಹಿಂದಿರುವ ನಿಜ ಸತ್ಯ ಏನು ಅನ್ನೋದು ಗೊತ್ತಿಲ್ಲ. ಶಿವಮೊಗ್ಗದಲ್ಲಿ ಈದ್ ಮೆರವಣೆಗೆ ನಡೆಯುತ್ತಿತ್ತು. ಈ ಮೆರವಣಿಗೆ ನಗರದುದ್ದಕ್ಕೂ ಸಾಗಿ ಅಲ್ಲಿನ ರಾಗಿಗುಡ್ಡದ ಬಳಿ ಬಂದಿತ್ತು. ಈ ಸಂದರ್ಭದಲ್ಲಿ ಮೆರವಣಿಗೆ ಹಿಂದಿನಿಂದ ಕಲ್ಲು ತೂರಾಟ ಶುರುವಾಗಿತ್ತು. ಇದಕ್ಕೆ ಪ್ರತಿಯಾಗಿ ಮೆರವಣಿಗೆಯಲ್ಲಿದ್ದವರೂ ಕಲ್ಲು ತೂರಕ್ಕೆ ಶುರು ಮಾಡಿದ್ರು, ಇದರ ಪರಿಣಾಮ ಕಲ್ಲು ತೂರಾಟ ನಡೆದ ಸ್ಥಳದಲ್ಲಿದ್ದ ಮನೆಗಳ ಕಿಟಕಿ ಗ್ಲಾಸ್ಗಳು ಪುಡಿ ಪುಡಿಯಾಗಿವೆ. ಅನೇಕ ವಾಹನಗಳ ಗ್ಲಾಸ್ಗಳು ಪುಡಿ ಪುಡಿಯಾಗಿವೆ. ಎರಡು ಗುಂಪುಗಳ ಮಧ್ಯ ಈ ಗಲಾಟೆ ಶುರುವಾಗುತ್ತಿದ್ದಂತೆ, ಪೊಲೀಸರು ಲಾಠಿ ಚಾರ್ಜ್ ಮಾಡಿ ಗಲಾಟೆ ನಿಯಂತ್ರಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ತಕ್ಷಣ ಸೆಕ್ಷನ್ 144 ಜಾರಿಗೊಳಿಸಿದ್ದಾರೆ. ಈಗ ಶಿವಮೊಗ್ಗ ಒಂದಿಷ್ಟು ತಣ್ಣಗಾಗಿದೆ. ಈಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು ಒಳ್ಳೆ ವಿಚಾರವೇ ಬಿಡಿ. ಹೆಚ್ಚು ಅನಾಹುತ ಸಂಭವಿಸಲು ಬಿಡದಂತೆ, ಶಿವಮೊಗ್ಗ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಪರಿಸ್ಥಿತಿಯನ್ನು ದಕ್ಷವಾಗಿ ನಿಯಂತ್ರಿಸಿದ್ದಕ್ಕೆ ಶಿವಮೊಗ್ಗ ಪೊಲೀಸರಿಗೆ ಒಂದು ಥ್ಯಾಂಕ್ಸ್ ಹೇಳೋಣ. ಇದೆಲ್ಲವೂ ಓಕೆ ಆದ್ರೆ, ನಿನ್ನೆಯ ಈ ಕಲ್ಲು ತೂರಾಟದ ಹಿಂದಿನ ನಿಜ ಸತ್ಯವನ್ನು ಭಾರತೀಯರು ತಿಳಿದುಕೊಳ್ಳಬೇಕಿದೆ. 

ಇದನ್ನೂ ವೀಕ್ಷಿಸಿ:  ಮೋಸ್ಟ್ ವಾಂಟೆಡ್ ಉಗ್ರರ ನಿಗೂಢ ಅಂತ್ಯ: ಒಂದೊಂದು ದಿನ.. ಒಂದೊಂದು ವಿಕೆಟ್! ಕೊಂದಿದ್ಯಾರು..?