ಏನಾಗುತ್ತಿದೆ ರಾಜಧಾನಿಯಲ್ಲಿ? ಬೆಚ್ಚಿ ಬೀಳಿಸುವಂತಿದೆ ಈ ಸುದ್ದಿ..!

1, Jul 2020, 5:15 PM

ಬೆಂಗಳೂರು (ಜು. 01): ರಾಜಧಾನಿಯ ಮಂದಿ ಬೆಚ್ಚಿ ಬೀಳುವ ಸುದ್ದಿಯೊಂದು ಹೊರ ಬಿದ್ದಿದೆ. ಕೊರೊನಾ ಆತಂಕ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಯಾರಿಗಾದ್ರೂ ಒಂದು ಜ್ವರ ಬಂದ್ರೆ, ಕೆಮ್ಮು, ನೆಗಡಿ ಶುರುವಾದ್ರೂ ಆತಂಕ ಶುರುವಾಗುತ್ತದೆ. ಜ್ವರ, ನೆಗಡಿ ಇದೆ ಅಂತ ಮೆಡಿಕಲ್ ಶಾಪ್‌ನಿಂದ ಮಾತ್ರೆಗಳನ್ನು ತೆಗೆದುಕೊಂಡವರ ಮಾಹಿತಿಯನ್ನು ಆರೋಗ್ಯ ಇಲಾಖೆ ಸಂಗ್ರಹಿಸುತ್ತಿದೆ. ಮೆಡಿಕಲ್ ಶಾಪ್ ಮಾಲಿಕರು ಕೊಟ್ಟ ಮಾಹಿತಿ ಪ್ರಕಾರ 1 ಲಕ್ಷ ಜನ ಕೆಮ್ಮು, ಜ್ವರ ಅಂತ ಮಾತ್ರೆ ತೆಗೆದುಕೊಂಡು ಹೋಗಿದ್ಧಾರೆ. ಈ ಅಂಕಿ ಅಂಶಗಳು ನಿಜಕ್ಕೂ ಆತಂಕ ಮೂಡಿಸುತ್ತಿದೆ. ಏನಾಗುತ್ತಿದೆ ರಾಜಧಾನಿಯಲ್ಲಿ? ಈ ವರದಿಯನ್ನು ಒಮ್ಮೆ ನೋಡಿ ಬಿಡಿ..!

ಪೊಲೀಸ್ ಅಧಿಕಾರಿಗಳ ಜೊತೆ ಗೃಹ ಸಚಿವರ ಸಭೆ; ಲಾಕ್‌ಡೌನ್ ಬಗ್ಗೆ ಚರ್ಚೆ?