Aug 10, 2020, 2:12 PM IST
ಮಡಿಕೇರಿ (ಆ. 10): ಕರ್ನಾಟಕದ ಕಾಶ್ಮಿರ, ಭಾರತದ ಸ್ಕಾಟ್‌ಲ್ಯಾಂಡ್, ವನ್ಯಜೀವಿಗಳ ತವರು ಕೊಡವ ನಾಡು ಇಂದು ಜಲಪ್ರಳಯಕ್ಕೆ ಸಿಲುಕಿದೆ. ಕೊಡಗಿನ ಬ್ರಹ್ಮಗಿರಿ ತಪ್ಪಲಿನಲ್ಲಿದ್ದ ತಲಕಾವೇರಿ ಅರ್ಚಕರ ಕುಟುಂಬ ಭೂಕುಸಿತದ ಪರಿಣಾಮ ಭೂ ಸಮಾಧಿಯಾಗಿದೆ. ಸುಂದರ ಕೊಡಗು ಮೃತ್ಯುಕೂಪವಾಗಿ ಮಾರ್ಪಾಡಾಗಿದೆ.
ವರುಣನ ಆರ್ಭಟ: ಕೊಡಗು ಜಿಲ್ಲೆಯಲ್ಲಿ ಸತತ ಮೂರನೇ ವರ್ಷ ಪ್ರಕೃತಿ ದುರಂತ..!
ಕೊಡಗು, ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಭೂ ಲೋಕದ ಸ್ವರ್ಗ ಎನಿಸಿಕೊಂಡ ಕೊಡಗು ಜಲಪ್ರಳಯಕ್ಕೆ ತುತ್ತಾಗುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ಕೊಡಗಿನಲ್ಲಿ ನಡೆಸಿದ ಅರಣ್ಯ ನಾಶವೇ ಭೂ ಕುಸಿತಕ್ಕೆ ಕಾರಣ ಎನ್ನಲಾಗುತ್ತಿದೆ. ನಮ್ಮ ದುರಾಸೆಯೇ ಇಂತಹ ವಿನಾಶಕ್ಕೆ ಕಾರಣವಾಗಿದೆ. ಈ ಬಗ್ಗೆ ಡಿಟೇಲಾಗಿ ಇಲ್ಲಿದೆ ನೋಡಿ..!