ಸಿಎಂ ತವರಲ್ಲಿ ಲಂಚಾವತಾರ, ಲೋಕೋಪಯೋಗಿ ಇಲಾಖೆಯಲ್ಲಿ ಇದ್ದಾರೆ ಭ್ರಷ್ಟರು...!

Jul 11, 2021, 5:41 PM IST

ಶಿವಮೊಗ್ಗ (ಜು. 11): ಸಿಎಂ ಯಡಿಯೂರಪ್ಪ ತವರು ಶಿವಮೊಗ್ಗ ಜಿಲ್ಲೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಲೋಕೋಪಯೋಗಿ ಇಲಾಖೆಯ ಶಿವಮೊಗ್ಗ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ.  ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರಲ್ಲಿ 5% ಕಮಿಷನ್ ಕೇಳುತ್ತಾರೆ ವಿಭಾಗ ಅಧಿಕಾರಿ ಬೀರೇಂದ್ರ.   ಲಂಚದ ಹಣ ಪಡೆದು ಮತ್ತಷ್ಟು ಲಂಚಕ್ಕೆ ಬೇಡಿಕೆ ಇಡುವ ಅಧಿಕಾರಿಯ ಲಂಚ ಬಾಕತನದ ವಿಡಿಯೋ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. 

ಅಕ್ರಮ ಕಲ್ಲು ಕ್ವಾರೆಗಳ ಮೇಲೆ ಶ್ರೀರಂಗಪಟ್ಟಣ ತಹಶೀಲ್ದಾರ್ ರೂಪಾ ದಾಳಿ