Jul 28, 2022, 11:18 AM IST
ಬೆಂಗಳೂರು (ಜು. 28): ಹತ್ಯೆಯಾದ ಪ್ರವೀಣ್ ನೆಟ್ಟಾರು ಸ್ಥಳೀಯ ಮುಸ್ಲಿಂರೊಡನೆ ಅತ್ಮೀಯ ಒಡನಾಟ ಹೊಂದಿದ್ದರು. ಹತ್ಯೆಯಾಗುವ ಕೆಲವೇ ಗಂಟೆಗೂ ಮೊದಲು ಮುಸ್ಲಿಂ ಗೆಳೆಯ ಆರಿಫ್ ಜೊತೆ ಇರುವ ಫೋಟೋವನ್ನು ವಾಟ್ಸಾಪ್ ಸ್ಟೇಟಸ್ಗೆ ಹಾಕಿದ್ದರು. ಸೋಮವಾರ ಆರೀಫ್ ನೂತನ ಮನೆಯ ಗೃಹ ಪ್ರವೇಶ ಕಾರ್ಯಕ್ರಮವಿತ್ತು. ಮಂಗಳವಾರ ಆರೀಫ್ ಮನೆಗೂ ಭೇಟಿ ನೀಡಿ ಶುಭ ಹಾರೈಸಿದ್ದರು. ಪ್ರವೀಣ್ ಜೊತೆಗಿನ ಒಡನಾಟದ ಬಗ್ಗೆ ಆಪ್ತ ಆರೀಫ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.