Mar 11, 2023, 12:06 PM IST
ಬೆಂಗಳೂರು (ಮಾ.11): ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭದಿಂದ ನೀಡಲಾಗುವ ಉಜ್ವಲ ಉದ್ಯಮಿ ಪ್ರಶಸ್ತಿ ಕರಾವಳಿ ಆವೃತ್ತಿ ನೀಡಲಾಗುತ್ತಿದ್ದು, ಮಾಧ್ಯಮ ಲೋಕದ ಇತಿಹಾಸದಲ್ಲೇ ಈ ತರಹ ವಿನೂತನ ಪ್ರಯತ್ನ ಮೊದಲ ಬಾರಿಗೆ ಕರಾವಳಿ ಭಾಗದ ಅಭಿವೃದ್ದಿ ಹಾಗೂ ಉದ್ಯೋಗ ಸೃಷ್ಟಿಸಲು ಅಪಾರ ಕೊಡುಗೆ ನೀಡಿರುವ ಉದ್ಯಮಿಗಳನ್ನು ಗುರುತಿಸಲಾಗುತ್ತಿದೆ. ಹೀಗಾಗಿ ಕರಾವಳಿ ಭಾಗದ ಉದ್ಯಮಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಬಾರಿಯ ಪ್ರಶಸ್ತಿಯನ್ನು ಜಿಎಂ ವಿದ್ಯಾನಿಕೇತನ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಪ್ರಕಾಶ್ ಚಂದ್ರ ಶೆಟ್ಟಿಗೆ ನೀಡಲಾಗಿದೆ.