Jan 10, 2021, 12:22 PM IST
ಬೆಂಗಳೂರು (ಜ. 10):ವಂಚಕ, ಸಕಲಕಲಾ ವಲ್ಲಭ ಯುವರಾಜ, ಪ್ರಭಾವಿಗಳನ್ನೇ ಮರಳು ಮಾಡಿ, ವಂಚಿಸಿದ್ದಾನೆ. ಈತನ ಜೊತೆ ರಾಜ್ಯದ ಉಪಮುಖ್ಯಮಂತ್ರಿ, ಸಚಿವರು, ಶಾಸಕರು, ಮಾಜಿ ಸಚಿವರು ಹಾಗೂ ಕಾಂಗ್ರೆಸ್ ಪಕ್ಷದ ಮಾಜಿ ರಾಜ್ಯ ಉಸ್ತುವಾರಿ ಫೋಟೋಗಳು ಬಹಿರಂಗವಾಗಿ ಸಾರ್ವಜನಿಕ ವಲಯದಲ್ಲಿ ವೈರಲ್ ಆಗಿವೆ.
ಲೂಟಿ ರಾಜ, ಕೋಟಿ ಸ್ವಾಮಿ, ಅರಮನೆಯಂಥಾ ಮನೆ, ಕೋಟಿಗಟ್ಟಲೇ ಆಸ್ತಿ.!
ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ವಸತಿ ಸಚಿವ ವಿ.ಸೋಮಣ್ಣ, ಶಾಸಕರಾದ ಮುರುಗೇಶ್ ನಿರಾಣಿ, ಸಿ.ಪಿ.ಯೋಗೇಶ್ವರ್ ಹಾಗೂ ಕಾಂಗ್ರೆಸ್ ಪಕ್ಷದ ಮಾಜಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಜತೆ ಯುವರಾಜ್ ತೆಗೆಸಿಕೊಂಡಿರುವ ಫೋಟೋಗಳು ಬಹಿರಂಗಗೊಂಡಿವೆ. ಈ ಫೋಟೋಗಳ ಬಹಿರಂಗ ಹಿನ್ನೆಲೆಯಲ್ಲಿ ಸಚಿವರು ಹಾಗೂ ಮುಖಂಡರಿಗೆ ತೀವ್ರ ಮುಜುಗರ ಉಂಟಾಗಿದ್ದು, ತಾವು ಆರೋಪಿ ಜತೆ ಯಾವುದೇ ವ್ಯಾವಹಾರಿಕ ಸಂಬಂಧ ಹೊಂದಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ. ಹಾಗಾದ್ರೆ ಈ ರಾಜಕಾರಣಿಗಳಿಗೆ, ಯುವರಾಜನಿಗೂ ಏನ್ ಸಂಬಂಧ..? ಈ ಫೋಟೋಗಳನ್ನು ತೆಗೆಸಿಕೊಂಡಿದ್ದೆಲ್ಲಿ..?