May 20, 2020, 12:27 PM IST
ಬೆಂಗಳೂರು(ಮೇ.20): ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ರಸ್ತೆಯ ಮೇಲೆ ಜನ ಸಂಚಾರ ಆರಂಭವಾಗಿದೆ. ಜನರು ತಮ್ಮ ತಮ್ಮ ಊರುಗಳಿಗೆ ತೆರಳಲು ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬಸ್ ನಿಲ್ದಾಣದಲ್ಲಿ ಜನಜಂಗುಳಿ ಹೆಚ್ಚಾಗುತ್ತಿದ್ದಂತೆ KSRTC ಹೆಚ್ಚುವರಿ ಬಸ್‌ಗಳನ್ನು ಆಯೋಜಿಸಿದೆ.
ಹೌದು, ಇಂದಿನಿಂದ ಪ್ರಯಾಣಿಕರಿಗಾಗಿ KSRTC 2000 ಬಸ್‌ಗಳನ್ನು ನಿಯೋಜನೆ ಮಾಡಿದೆ. 28 ಜಿಲ್ಲೆಗಳಿಗೆ ಹೆಚ್ಚುವರಿಯಾಗಿ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ಬಣಗುಡುತ್ತಿದೆ BMTC ಬಸ್ ನಿಲ್ದಾಣ, ಆದ್ರೆ KSRTC ಫುಲ್ ರಶ್..!
ಮಂಗಳವಾರ ಸಂಜೆ 5 ಗಂಟೆ ನಂತರ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಹೀಗಾಗಿ ಉತ್ತರ ಕರ್ನಾಟಕದ ಕಡೆ ಪ್ರಯಾಣಿಸಬೇಕಿದ್ದ ಜನರು ರಾತ್ರಿಯಿಡಿ ಮೆಜೆಸ್ಟಿಕ್‌ನಲ್ಲೇ ಪರದಾಡಬೇಕಾದ ಪರಿಸ್ಥಿತಿ ಎದುರಾಗಿತ್ತು. ಇದೀಗ ಸುಗಮ ಸಂಚಾರ ವ್ಯವಸ್ಥೆಗಾಗಿ KSRTC ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.