ಪಿಪಿಇ ಕಿಟ್ ಧರಿಸಿ ಬಂದ ವೈದ್ಯಕೀಯ ಸಿಬ್ಬಂದಿ ನೋಡಿ ದೆವ್ವವೆಂದು ಕಿರುಚಿದ ರೋಗಿ..!

Sep 6, 2021, 11:15 AM IST

ಬೆಂಗಳೂರು (ಸೆ. 06): ಕೊರೋನಾ ಬಂದಾಗಿನಿಂದ ವೈದ್ಯಕೀಯ ಸಿಬ್ಬಂದಿ ಪಿಪಿಇ ಕಿಟ್ ಧರಿಸಿ ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿದ್ದಾರೆ. ಮೊದಲಿಗೆ ಕೆಲವರು ಪಿಪಿಇ ಕಿಟ್ ಧರಿಸಿದ್ದವರನ್ನು ಕಂಡು ಬೆಚ್ಚಿ ಬೀಳುತ್ತಿದ್ದರು. ಅದರಂತೆ ಇಲ್ಲೊಂದು ಆಸ್ಪತ್ರೆಯಲ್ಲಿ ಪಿಪಿಇ ಕಿಟ್ ಧರಿಸಿ ಬಂದ ಸಿಬ್ಬಂದಿಯನ್ನು ಕಂಡು ರೋಗಿಯೊಬ್ಬರು ಬೆಚ್ಚಿ ಬಿದ್ದಿದ್ದಾರೆ. 

ಮದ್ಯದ ನಶೆ.. ಮಾನಿನಿಯರ ಸಖ್ಯ.. ನಾನು ಅವನಲ್ಲ ಎಂದ ವರ್ಮಾ ವಿಡಿಯೋ

ಕೊರೋನಾ ರೋಗಿಗಳ ಆರೋಗ್ಯ ವಿಚಾರಣೆಗೆ ವಾರ್ಡ್‌ನೊಳಗೆ ವೈದ್ಯಕೀಯ ಸಿಬ್ಬಂದಿಯೊಬ್ಬರು ಪಿಪಿಇ ಕಿಟ್ ಧರಿಸಿ ಬರುತ್ತಾರೆ. ಪಿಪಿಇ ಕಿಟ್ ಧರಿಸಿ ಬಂದ ಸಿಬ್ಬಂದಿ ನೋಡಿ, ದೆವ್ವವೆಂದು ಭಾವಿಸಿ ಕಿರುಚಾಡಿದ್ದಾರೆ. ರೋಗಿಯನ್ನು ಸಮಾಧಾನಿಸಲು ಸುತ್ತಮುತ್ತಲಿನ ರೋಗಿಗಳು ಯತ್ನಿಸಿದ್ದಾರೆ. ಅಲ್ಲಿದ್ದ ಸಿಬ್ಬಂದಿಯೊಬ್ಬರು ಬಿದ್ದು ಬಿದ್ದು ನಕ್ಕಿದ್ದಾರೆ. ಇದು ಎಲ್ಲಿಯ ದೃಶ್ಯ, ಯಾವ ಆಸ್ಪತ್ರೆ ಎಂದು ತಿಳಿದು ಬಂದಿಲ್ಲ.