Jun 29, 2020, 11:42 AM IST
ಬೆಂಗಳೂರು(ಜೂ.29): ಕೊರೋನಾ ಎನ್ನುವ ಹೆಮ್ಮಾರಿ ವಾಯುವಿನ ವೇಗದಲ್ಲಿ ಹಬ್ಬಲಾರಂಭಿಸಿದ್ದು, ಮುಂದಿನ ಒಂದು ವಾರ ರಾಜ್ಯದ ಪಾಲಿಗೆ ನಿರ್ಣಾಯಕ ಎನಿಸಿದೆ. ಈಗಗಾಲೇ ಕಳೆದ ಎರಡರಿಂದ ಮೂರು ದಿನದಲ್ಲಿ ಕೊರೋನಾ ಏರಿಕೆಯಲ್ಲಿ ಹೊಸ ದಾಖಲೆ ಬರೆದಿದೆ.
ಈಗ ರಾಜ್ಯದಲ್ಲಿ ಸಾವಿರದ ಆಸುಪಾಸಿನಲ್ಲಿ ಕೊರೋನಾ ಕೇಸ್‌ಗಳು ಪತ್ತೆಯಾಗಲಾರಂಭಿಸಿವೆ. ಮುಂದಿನ ಕೆಲವು ದಿನಗಳಲ್ಲಿ ದಿನಕ್ಕೆ ಎರಡು ಸಾವಿರ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಲೆಕ್ಕಾಚಾರ ಹಾಕಲಾರಂಭಿಸಿದ್ದಾರೆ.
ರಾತ್ರಿ ಕರ್ಫ್ಯೂ ಮತ್ತಷ್ಟು ಕಠಿಣಗೊಳಿಸ್ತಾರಾ CM ಬಿಎಸ್‌ವೈ
ಕಳೆದ ತಿಂಗಳಿನಲ್ಲೆಲ್ಲಾ ನೂರು-ಇನ್ನೂರು ಇರುತ್ತಿದ್ದ ರಾಜ್ಯದ ಲೆಕ್ಕಾಚಾರ ಇನ್ನುಮುಂದೆ ಸಾವಿರದಲ್ಲಿ ಆದರೂ ಅಚ್ಚರಿ ಪಡಬೇಕಿಲ್ಲ. ಹೀಗಾಗಿ ಆದಷ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮನೆಯಲ್ಲೇ ಉಳಿಯುವ ಮೂಲಕ ಕೊರೋನಾದಿಂದ ಬಚಾವಾಗಬೇಕಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.