ಇಂದಿರಾ ಗಾಂಧಿ ಕಾಲದಲ್ಲಿ ನನ್ನನ್ನು ಪರಿಷ್ಕರಣೆ ಸಮಿತಿಯಿಂದ ಹೊರಗಿಟ್ಟಿದ್ರು: ಭೈರಪ್ಪ

Jun 2, 2022, 5:03 PM IST

ಬೆಂಗಳೂರು (ಜೂ. 02): ಪಠ್ಯಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಾಹಿತಿ ಎಸ್‌ ಎಲ್ ಭೈರಪ್ಪ (SL Bhyrappa) ಎಂಟ್ರಿ ಕೊಟ್ಟಿದ್ದಾರೆ. 'ಇಂದಿರಾ ಗಾಂಧಿ ಕಾಲದಲ್ಲೂ ಪಠ್ಯ ಪುಸ್ತಕ ಪರಿಷ್ಕರಣೆ ಆಗಿತ್ತು. ಆ ಸಂದರ್ಭದಲ್ಲಿ ನನ್ನನ್ನು ಪರಿಷ್ಕರಣೆ ಸಮಿತಿಯಿಂದ ದೂರ ಇಟ್ಟಿದ್ದರು. ನನ್ನನ್ನೂ ಒಳಗೊಂಡ 5 ಜನರ ಸಮಿತಿಯನ್ನು ಸರ್ಕಾರ ರಚಿಸಿತ್ತು. ಸತ್ಯವನ್ನು ಹೇಳಬೇಕು ಎಂದಿದ್ದಕ್ಕೆ ನನ್ನನ್ನು ಹೊರಗಿಟ್ರು. ನನ್ನ ಬದಲಿಗೆ ಕಮ್ಯುನಿಸ್ಟ್ ಚಿಂತಕನನ್ನು ಸೇರಿಸಲಯಿತು. ಅಂದಿನ ಕಾಂಗ್ರೆಸ್ ಆಡಳಿತದ ರಾಜ್ಯಗಳು ಪಠ್ಯವನ್ನು ಒಪ್ಪಿಕೊಂಡವು. ವಿದ್ಯಾಭ್ಯಾಸದಲ್ಲಿ ಮಕ್ಕಳಿಗೆ ಸತ್ಯವನ್ನ ಹೇಳಬೇಕೆ ವಿನಃ ಐಡಿಯಾಲಜಿಯನ್ನಲ್ಲ' ಎಂದು ಎಸ್‌ ಎಲ್ ಭೈರಪ್ಪ ಹೇಳಿದ್ದಾರೆ. 

ಪಠ್ಯಪುಸ್ತಕ ಪರಿಷ್ಕರಣೆ ವಿವಾದಕ್ಕೆ ಬೆಂಕಿ ಟ್ವಿಸ್ಟ್ ಕೊಟ್ಟ ಗೃಹ ಸಚಿವ