May 26, 2020, 6:10 PM IST
ಬೆಂಗಳೂರು (ಮೇ. 26): ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಆನ್‌ಲೈನ್ ದರ್ಶನಕ್ಕೆ ಅವಕಾಶ ಮಾಡಿಕೊಡಿ ಅಂತ ಇತ್ತೀಚಿಗೆ ರಾಜ್ಯ ಸರ್ಕಾರ ಆದೇಶ ನೀಡಿತ್ತು. ಕುಕ್ಕೆಯಲ್ಲಿ ಆನ್‌ಲೈನ್ ದರ್ಶನಕ್ಕೆ ಅರ್ಚಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗರ್ಭಗುಡಿಯ ಫೋಟೋ, ವಿಡಿಯೋ ಸೆರೆಗೆ ಆಕ್ಷೇಪ ವ್ಯಕ್ತವಾಗಿದೆ. ಸಂಪ್ರದಾಯದ ಪ್ರಕಾರ ವಿಡಿಯೋ ಚಿತ್ರೀಕರಣ ನಿಷಿದ್ಧ. ಹೀಗಾಗಿ ಆನ್‌ಲೈನ್ ದರ್ಶನ ನಿಷಿದ್ಧ ಎಂದು ಆಡಳಿತ ಮಂಡಳಿಗೆ ಕುಕ್ಕೆಯ ಪ್ರಧಾನ ಅರ್ಚಕರು ತಿಳಿಸಿದ್ದಾರೆ.