ಚಾಂದನಿ ಚೌಕ್‌ ಸೀಲ್‌ಡೌನ್‌; ಶಿವಾಜಿನಗರ ಬಸ್‌ ನಿಲ್ದಾಣಕ್ಕಿಲ್ಲ ಎಂಟ್ರಿ

Jun 4, 2020, 3:18 PM IST

ಬೆಂಗಳೂರು(ಜೂ.04): ಶಿವಾಜಿನಗರದಲ್ಲಿ ಕೊರೋನಾ ವೈರಸ್‌ ದೃಢಪಟ್ಟ ಬೆನ್ನಲ್ಲೇ ಚಾಂದನಿ ಚೌಕ್‌ ಪ್ರದೇಶವನನ್ನ ಸೀಲ್‌ಡೌನ್‌ ಮಾಡಲಾಗಿದೆ. ಹೀಗಾಗಿ ಶಿವಾಜಿನಗರ ಬಸ್‌ ನಿಲ್ದಾಣಕ್ಕೆ ಬಿಎಂಟಿಸಿ ಬಸ್‌ ಪ್ರವೇಶವನ್ನ ಸ್ಥಗಿತಗೊಳಿಸಲಾಗಿದೆ. ಈ ಪ್ರದೇಶದಲ್ಲಿ ಜನ ಸಂಚಾರ ಬಹಳ ವಿರಳವಾಗಿದೆ.

ರಾಜ್ಯಸಭೆ ಚುನಾವಣೆ: ಬಿಜೆಪಿ ಟಿಕೆಟ್‌ಗೆ ಕತ್ತಿ ಬ್ರದರ್ಸ್ ಲಾಬಿ

ಪ್ರಯಾಣಿಕರಿಲ್ಲದೆ ಶಿವಾಜಿನಗರ ಬಸ್‌ ನಿಲ್ದಾಣಕ್ಕೆ ಬಿಕೋ ಎನ್ನುತ್ತಿದೆ. ಇಡೀ ಏರಿಯಾದಲ್ಲಿ ಜನ ಸಂಚಾರ ಹಾಗೂ ವಾಹನ ಸಂಚಾರವೇ ಇಲ್ಲದಂತಾಗಿದೆ. ರಸ್ತೆಗಳೆಲ್ಲಾ ಖಾಲಿ ಖಾಲಿ ಹೊಡೆಯುತ್ತಿವೆ. ಜನರು ಮನೆ ಬಿಟ್ಟು ಹೊರಗಡೆ ಬರೋದಕ್ಕೂ ಕೂಡ ಹೆದರುವಂತ ಪರಿಸ್ಥಿತಿ ನಿರ್ಮಾಣವಾಗಿದೆ.