Dec 25, 2020, 3:07 PM IST
ಬೆಂಗಳೂರು (ಡಿ. 25): ಸಿಲಿಕಾನ್ ಸಿಟಿಯಲ್ಲಿ ಬ್ರಿಟನ್ ವೈರಸ್ ಭೀತಿ ಹೆಚ್ಚಾಗುತ್ತಿದೆ. ಬ್ರಿಟನ್ನಿಂದ ಡಿ. 19 ರಂದು ಬೆಂಗಳೂರಿಗೆ ಆಗಮಿಸಿದ ಮತ್ತೆ ನಾಲ್ವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಬ್ರಿಟನ್ನಿಂದ ವಾಪಸ್ ಆಗಿರುವ 7 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಂತಾಗಿದೆ.
ಕೊರೊನಾ ಲಸಿಕೆಯಲ್ಲಿ ಹಂದಿ ಅಂಶ; ಔಷಧಿ ವಿರುದ್ಧ ಫತ್ವಾ ಹೊರಡಿಸಿದ ಮುಸ್ಲಿಂ ಬೋರ್ಡ್!
ಡಿ. 12 ರಿಂದ ಡಿ. 21 ರವರೆಗೆ ಬ್ರಿಟನ್ನಿಂದ ಬೆಂಗಳೂರಿಗೆ 1582 ಮಂದಿ ಆಗಮಿಸಿದ್ದಾರೆ. ಅವರಲ್ಲಿ 7 ಮಂದಿಗೆ ಸೋಂಕು ದೃಢಪಟ್ಟಿದೆ. ಈಗಾಗಲೇ ಬಿಬಿಎಂಪಿ 400 ಕ್ಕೂ ಹೆಚ್ಚು ಮಂದಿಯನ್ನು ಟೆಸ್ಟ್ಗೆ ಒಳಪಡಿಸಬೇಕಾಗಿದೆ.