May 29, 2020, 12:36 PM IST
ಬೆಂಗಳೂರು (ಮೇ. 29): 'ನನಗೆ ಪಕ್ಷದ ಬಗ್ಗೆಯಾಗಲಿ ಅಥವಾ ಮುಖ್ಯಮಂತ್ರಿ ಯುಡಿಯೂರಪ್ಪ ಬಗ್ಗೆ ಆಗಲಿ ನೂರಕ್ಕೆ ನೂರರಷ್ಟು ಅಸಮಾಧಾನವಿಲ್ಲ ಎಂದು ಆಡಳಿತಾರೂಢ ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯ ಕೆಲವು ಶಾಸಕರು ಸಭೆ ನಡೆಸಿರುವ ಬಗ್ಗೆ ನನಗೆ ಮಾಧ್ಯಮಗಳಿಂದ ಗೊತ್ತಾಯಿತು. ಆದರೆ ಆ ಸಭೆಯಲ್ಲಿ ನಾನು ಪಾಲ್ಗೊಂಡಿಲ್ಲ. ಕೇವಲ ಮಂತ್ರಿಗಿರಿಯಷ್ಟೇ ಅಲ್ಲ. ನನಗೆ ಮುಂದೆ ಟಿಕೆಟ್ ನೀಡದಿದ್ದರೂ ಬಿಜೆಪಿಯಲ್ಲೇ ಇರುತ್ತೇನೆ' ಎಂದು ಮುರುಗೇಶ್ ನಿರಾಣಿ ಹೇಳಿದ್ದಾರೆ.