Jul 11, 2021, 1:16 PM IST
ಬೆಂಗಳೂರು (ಜು. 11): ಜೆಡಿಎಸ್ ಕಾರ್ಯಕರ್ತರ ವಿರುದ್ಧ ಅಂಬಿ ಫ್ಯಾನ್ಸ್ ಇಂದು ಕಂಠೀರವ ಸ್ಟುಡಿಯೋದಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ. 'ಈ ಪ್ರತಿಭಟನೆ ಬಗ್ಗೆ ನನಗೆ ಮಾಹಿತಿ ಇಲ್ಲ. ತಿಳಿದುಕೊಂಡು ಹೇಳಬೇಕಾಗುತ್ತದೆ' ಎಂದು ಸುಮಲತಾ ಪ್ರತಿಕ್ರಿಯಿಸಿದ್ದಾರೆ. ಇನ್ನು ಗಣಿ ಸಚಿವರನ್ನು ಭೇಟಿಯಾಗುವ ಬಗ್ಗೆ ಪ್ರಶ್ನಿಸಿದಾಗ, ಗಣಿ ಸಚಿವರು ಕಲಬುರ್ಗಿಯಲ್ಲಿದ್ದಾರೆ. ಕರೆ ಮಾಡಿ ಮಾತನಾಡುತ್ತೇನೆ' ಎಂದಿದ್ದಾರೆ.