May 29, 2020, 1:01 PM IST
ಬೆಂಗಳೂರು (ಮೇ. 29): ಲಾಕ್‌ಡೌನ್ 4.0 ಮುಕ್ತಾಯಕ್ಕೆ 3 ದಿನವಷ್ಟೇ ಬಾಕಿ ಇದೆ. ಮೇ 31 ಕ್ಕೆ ಮುಕ್ತಾಯಗೊಳ್ಳಲಿದ್ದು ಮತ್ತೆ ವಿಸ್ತರಣೆಯಾಗುವುದಾ ಎಂಬ ಚರ್ಚೆ ಶುರುವಾಗಿದೆ.
ಮಹತ್ವದ ಸುದ್ದಿ, ರಾಜ್ಯ ಸರ್ಕಾರದಿಂದ ಕ್ವಾರಂಟೈನ್ ವ್ಯವಸ್ಥೆಯೇ ಬದಲು
ಈ ಬಾರಿ ಇಡೀ ದೇಶದ ಬದಲು ದೇಶದ ಒಟ್ಟು ಸೋಂಕಿನ ಪ್ರಮಾಣದಲ್ಲಿ ಶೇ. 70 ರಷ್ಟು ಪಾಲು ಹೊಂದಿರುವ ಬೆಂಗಳೂರು ಸೇರಿದಂತೆ 11 ನಗರಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗುವುದು. ಮತ್ತೊಂದೆಡೆ ಸೋಂಕು ರಹಿತ ಪ್ರದೇಶಗಳಲ್ಲಿ ನಿರ್ಬಂಧಗಳು ಇನ್ನಷ್ಟು ಸಡಿಲಗೊಳ್ಳುವ ಸಾಧ್ಯತೆ ಇದೆ. ಈ ಎಲ್ಲಾ ವಿಷಯಗಳನ್ನು ಪ್ರಧಾನಿ ಮೋದಿ ಮೇ 31 ರಂದು ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.