ಕತಾರ್​ನಲ್ಲಿ ಮೊಳಗಿದ ಕನ್ನಡ ಡಿಂಡಿಮ! ಕತಾರ್ ಕರ್ನಾಟಕ ಸಂಘದಲ್ಲಿ ಕೋಟಿ ಕಂಠ ಗಾಯನ

Oct 28, 2022, 8:09 PM IST

ಕನ್ನಡರಾಜ್ಯೋತ್ಸವ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡ ಕೋಟಿ ಕಂಠ ಗಾಯನ, ನನ್ನ ನಾಡು ನನ್ನ ಹಾಡು ಕಾರ್ಯಕ್ರಮಕ್ಕೆ ಅನಿವಾಸಿ ಭಾರತೀಯರು ಕೂಡ ದನಿಗೂಡಿಸಿದ್ರು. ಕತಾರ್​ನಲ್ಲಿರುವ ಕರ್ನಾಟಕ ಸಂಘವೂ ಸಹ ‘ನನ್ನ ನಾಡು ನನ್ನ ಹಾಡು’ ಕಾರ್ಯಕ್ರಮ ಆಯೋಜಿಸಿತ್ತು. ಕರ್ನಾಟಕ ಸಂಘದ ಸದಸ್ಯರು ಜಯ ಭಾರತ ಜನನಿಯ ತನುಜಾತೆ ಸೇರಿ 6 ಹಾಡುಗಳನ್ನು ಹಾಡುವ ಮೂಲಕ, ತಾಯ್ನೆಲ, ತಾಯ್ನುಡಿಗೆ ತಮ್ಮ ಅಭಿಮಾನ ಪ್ರದರ್ಶಿಸಿದ್ರು. ಈ ಕಾರ್ಯಕ್ರಮದಲ್ಲಿ ನಮ್ಮ ನಾಡು ನುಡಿಯ ಬಗ್ಗೆ ಅಭಿಮಾನವನ್ನು ಮೂಡಿಸುವ ಕನ್ನಡ ನಾಡಿನ ಹೆಮ್ಮೆಯ ಕವಿಗಳು ರಚಿಸಿದ ನಾಡಗೀತೆ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬಾರಿಸು ಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ, ವಿಶ್ವವಿನೂತನ ವಿದ್ಯಾಚೇತನ ಹಾಗೂ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಆರು ಗೀತೆಗಳನ್ನು  ಹಾಡಲಾಯಿತು.