ಷರತ್ತು ವಿಧಿಸಿ ಸಿ.ಟಿ. ರವಿಗೆ ಜಾಮೀನು: ಹೈಕೋರ್ಟ್ ಆದೇಶದಲ್ಲೇನಿದೆ?

Dec 21, 2024, 12:46 PM IST

ಬೆಂಗಳೂರು(ಡಿ.21): ತನಿಖೆಗೆ ಸಹಕರಿಸಬೇಕೆಂಬ ಷರತ್ತು ವಿಧಿಸಿ ಬಿಜೆಪಿ ಎಂಲ್‌ಸಿ ಸಿ.ಟಿ. ರವಿಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ತಕ್ಷಣವೇ ಸಿ.ಟಿ. ರವಿ ಅವರನ್ನ ಬಿಡುಗಡೆ ಮಾಡುವಂತೆ ಹೈಕೋರ್ಟ್​ ಆದೇಶಿಸಿದೆ. 

ಈ ಮೂಲಕ ಸಿ.ಟಿ ರವಿಗೆ ಬಿಗ್ ರಿಲೀಫ್ ಸಿಕ್ಕಿದೆ. 7 ವರ್ಷಕ್ಕಿಂತ ಕಡಿಮೆ ಶಿಕ್ಷೆ ಕೇಸ್​ನಲ್ಲಿ 41ಎ ನೋಟಿಸ್ ಕೊಡಬೇಕಿತ್ತು. ಪೊಲೀಸರು ಬಂಧನಕ್ಕೆ ಕಾರಣ ನೀಡಿದ ಬಗ್ಗೆ ದಾಖಲೆಗಳು ಇಲ್ಲ. ಅರ್ನಬ್ ಗೋಸ್ವಾಮಿ ಕೇಸ್​ನ ಸುಪ್ರೀಂಕೋರ್ಟ್ ಆದೇಶ ಸಲ್ಲಿಸಿದ್ದಾರೆ. ಬಂಧನ ಅಕ್ರಮ, ತಕ್ಷಣವೇ ಬಿಡುಗಡೆಗೆ ಮನವಿ ಮಾಡಿಕೊಂಡಿದ್ದಾರೆ. ವಿಧಾನ ಪರಿಷತ್​​ನಲ್ಲಿ ಈ ರೀತಿಯ ಘಟನೆ ನಡೆದಿದ್ದು ದುರದೃಷ್ಟಕರ. ಪೊಲೀಸರ ಹಲ್ಲೆಯಿಂದ ಗಾಯವಾಗಿದೆ ಎಂದು ಸಿ.ಟಿ ರವಿ ವಕೀಲರು ಹೇಳಿದ್ದಾರೆ. 

ಸಿಟಿ ರವಿಗೆ 41ಎ ಅಡಿಯಲ್ಲಿ ನೋಟಿಸ್ ಕೊಡಬೇಕಿತ್ತು, ಬಂಧನ ಪ್ರಶ್ನಿಸಿದ ಹೈಕೋರ್ಟ್!

ಚಿಕಿತ್ಸೆಯ ವಿವರವನ್ನು ವೈದ್ಯಾಧಿಕಾರಿ ಸರಿಯಾಗಿ ನಮೂದು ಮಾಡಿಲ್ಲ. ಏನನ್ನೂ ರೆಕಾರ್ಡ್ ಮಾಡಿಲ್ಲ ಎಂದು ಸಭಾಪತಿ ಹೇಳಿಕೆ ನೀಡಿದ್ದಾರೆ. ಆರೋಪಿ ಸಿ.ಟಿ ರವಿ ಬಂಧಿಸಲು ಹಲ್ಲೆ ಮಾಡುವ ಅಗತ್ಯ ಇರಲಿಲ್ಲ. ಈ ಘಟನೆ ನಡೆದಿರುವುದು ದುರದೃಷ್ಟಕರ. ಕಾನೂನು ಪಾಲಿಸಿ ಕ್ರಮ ಕೈಗೊಳ್ಳಬಹುದಿತ್ತು ಎಂದು ಸಿ.ಟಿ. ರವಿ ಅವರನ್ನ ತಕ್ಷಣವೇ ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶಿಸಿದೆ.