May 14, 2020, 1:26 PM IST
ಬೆಂಗಳೂರು(ಮೇ.14): ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಇದು ಹೊರ ರಾಜ್ಯ ಹಾಗೂ ವಿದೇಶದಿಂದ ರಾಜ್ಯಕ್ಕೆ ಬರುವವರಿಗೆ ಕೊಂಚ ನರೆಮ್ಮದಿ ನೀಡಿದೆ.
ಹೌದು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಕ್ವಾರಂಟೈನ್ ವಿಚಾರದಲ್ಲಿ ನಿಯಮಗಳನ್ನು ಕೊಂಚ ಬದಲಾಯಿಸಿದೆ. ಗರ್ಇಣಿ ಹಾಗೂ ಹತ್ತು ವರ್ಷದೊಳಗಿನ ಮಕ್ಕಳು ಹಾಗೂ ಎಂಭತ್ತು ವರ್ಷ ಮೇಲ್ಪಟ್ಟ ವೃದ್ಧರಿಗೆ ಸಾಂಸ್ಥಿಕ ಕ್ವಾರಂಟೈನ್ ಇರುವುದಿಲ್ಲ.
ಇಷ್ಟೇ ಅಲ್ಲದೇ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರಿಗೂ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಲಾಗುತ್ತದೆ, ಜೊತೆಗೆ ಯಾರಲ್ಲಿ ಕೊರೋನಾ ಲಕ್‌ಷಣಗಳಿಲ್ಲವೋ ಅವರಿಗೂ ಕ್ವಾರಂಟೈನ್‌ನಿಂದ ಮುಕ್ತಿ ಸಿಗಲಿದೆ. ಈ ಮೂಲಕ ಕರ್ನಾಟಕ ಎಂಟ್ರಿ ರೂಲ್ಸ್‌ನಲ್ಲಿ ಸರ್ಕಾರ ಭಾರೀ ಬದಲಾವಣೆ ತಂದಿದೆ.