Jul 30, 2022, 1:06 PM IST
ಬೆಂಗಳೂರು (ಜು. 30): ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಎನ್‌ಐಎ ಹಸ್ತಾಂತರಿಸಿದೆ. ಎನ್‌ಐಎ ತನಿಖೆ ಯಾವ ರೀತಿ ನಡೆಯಲಿದೆ ಎಂದು ನೋಡುವುದಾದರೆ, ಪೊಲೀಸರ ಕೇಸ್ ಫೈಲ್ ಕೂಲಂಕುಷವಾಗಿ ಅಧ್ಯಯನ ನಡೆಸಲಾಗುತ್ತದೆ. NIA ತಂಡದಿಂದಲೇ ಪ್ರತ್ಯೇಕವಾಗಿ FIR ದಾಖಲಾಗುತ್ತದೆ. FIR ದಾಖಲಿಸಿ ಎನ್‌ಐಎ ತನಿಖೆ ಆರಂಭಿಸಲಿದೆ. ಹತ್ಯೆ ನಡೆದ ಸ್ಥಳಕ್ಕೆ ತೆರಳಿ ಎನ್ಐಎ ತಂಡ ಪರಿಶೀಲನೆ ನಡೆಸಲಿದೆ. ಪ್ರವೀಣ್ ಕುಟುಂಬ, ಆಪ್ತರು, ಪ್ರತ್ಯಕ್ಷದರ್ಶಿಗಳ ವಿಚಾರಣೆ ನಡೆಯಲಿದೆ.