Jan 11, 2021, 10:00 AM IST
ಬೆಂಗಳೂರು (ಜ. 11): ದೇಶದಾದ್ಯಂತ ಜ. 16 ರಿಂದ ಲಸಿಕೆ ವಿತರಣೆ ಆರಂಭವಾಗಲಿದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಸಕಲ ಸಿದ್ದತೆ ನಡೆದಿದೆ.
1.30 ಕೋಟಿ ಡೋಸ್ ಲಸಿಕೆ ಸಂಗ್ರಹ ಸಾಮರ್ಥ್ಯದ ಎರಡು - ವಾಕ್ ಇನ್ ಕೂಲರ್, ಹಾಗೂ ಒಂದು ವಾಕ್ ಇನ್ ಫ್ರೀಜರ್ ಹೊಂದಿದ್ದೇವೆ. ಬೆಂಗಳೂರು, ಬೆಳಗಾವಿಯಲ್ಲಿಲಸಿಕೆ ಸಂಗ್ರಹಿಸಿ, ಬಳಿಕ 5 ಪ್ರಾದೇಶಿಕ ಲಸಿಕಾ ದಾಸ್ತಾನು ವ್ಯವಸ್ಥೆಗೆ ರವಾನಿಸಲಾಗುವುದು ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್, 7 ಶಾಸಕರಿಗೆ ಸಚಿವ ಸ್ಥಾನ, ಯಾರ ಹೆಸರು ಅಂತಿಮ..?