ಇಂದು ಮತ್ತೆರಡು ಪ್ರತಿಭಟನೆಗೆ ಕರ್ನಾಟಕ ಸಾಕ್ಷಿ ; ಬೇಡಿಕೆ ಈಡೇರದಿದ್ರೆ ಉಗ್ರ ಹೋರಾಟದ ಎಚ್ಚರಿಕೆ

Dec 16, 2020, 9:32 AM IST

ಬೆಂಗಳೂರು (ಡಿ. 16): ಇಂದು ಎರಡು ಪ್ರತಿಭಟನೆಗೆ ರಾಜ್ಯ ಸಾಕ್ಷಿಯಾಗಲಿದೆ. ದೆಹಲಿ ರೈತರ ಪ್ರತಿಭಟನೆ ಪರ ಐಕ್ಯ ಸಮಿತಿ ಕೈ ಜೋಡಿಸಿದೆ. ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ಇಂದಿನಿಂದ ಮೌರ್ಯ ಸರ್ಕಲ್‌ನಲ್ಲಿ ಅಹೋರಾತ್ರಿ ಧರಣಿ ನಡೆಸಲಿದೆ.

50 ವರ್ಷಗಳಿಂದ ಇಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯೇ ನಡೆದಿಲ್ಲ..!

ಇನ್ನೊಂದು ಕಡೆ ಶಿಕ್ಷಕರೂ ಕೂಡಾ ಪ್ರತಿಭಟನೆಗೆ ಮುಂದಾಗಿದ್ದಾರೆ. RTE ಹಣ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಬೇಡಿಕೆ ಈಡೇರದಿದ್ರೆ ಮುಂದಿನ ಹೋರಾಟಕ್ಕೆ ಪ್ಲ್ಯಾನ್ ಮಾಡಿದ್ಧಾರೆ.