ರೈಲ್ವೇ ನಿಲ್ದಾಣಕ್ಕೆ ಮುತ್ತಿಗೆ ಯತ್ನ; ನಾರಾಯಣ ಗೌಡ್ರು ಸೇರಿದಂತೆ ಕರವೇ ಕಾರ್ಯಕರ್ತರು ವಶಕ್ಕೆ

Sep 28, 2020, 11:38 AM IST

ಬೆಂಗಳೂರು (ಸೆ. 28): ರೈತರ ಹೋರಾಟಕ್ಕೆ ಕರವೇ ಸಾಥ್ ನೀಡಿದೆ. ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಬೆಂಗಳೂರು ರೈಲ್ವೇ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಮುಂದಾದಾಗ ನಾರಾಯಣ ಗೌಡ್ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ನಾರಾಯಣ ಗೌಡ್ರು ಹಾಗೂ ಕರವೇ ಕಾರ್ಯಕರ್ತರನ್ನು ಬಂಧಿಸಿ ಕರೆದುಕೊಂಡು ಹೋಗುತ್ತಿರುವ ಬಸ್‌ ಕೆಳಗೆ ಮಲಗಿ ಕಾರ್ಯಕರ್ತರು ಪ್ರತಿಭಟಿಸುತ್ತಿದ್ದಾರೆ. ಬಸ್‌ ಮುಂದೆ ಹೋಗಲು ಬಿಡುತ್ತಿಲ್ಲ. ಸರ್ಕಾರದ ವಿರುದ್ಧ, ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಕರ್ನಾಟಕ ಬಂದ್: ಪ್ರತಿಭಟನಾನಿರತ ಮಹಿಳೆಯರಿಂದ ಬೆಂಗಳೂರು ಏರ್‌ಪೋರ್ಟ್‌ಗೆ ಮುತ್ತಿಗೆ

'ಸರ್ಕಾರದ ಈ ನಡೆ ಯಡಿಯೂರಪ್ಪನವರಿಗೆ ಯೋಗ್ಯವಾಗಿದ್ದಲ್ಲ. ಇದನ್ನು ವಾಪಸ್‌ ತೆಗೆದುಕೊಳ್ಳುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ' ಎಂದು ನಾರಾಯಣ ಗೌಡ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ.