Jun 29, 2020, 12:40 PM IST
ಬೆಂಗಳೂರು (ಜೂ. 29): ದುಬೈಯಿಂದ ಇಂಡಿಯಾಗೆ ಬಂದ ಕನ್ನಡಿಗರು ಪರದಾಡುತ್ತಿದ್ದಾರೆ. ದಾಖಲೆ ಇಲ್ಲವೆಂದು ರಾಜ್ಯಕ್ಕೆ ಬರಲು ಅನುಮತಿ ನಿರಾಕರಿಸಲಾಗಿದೆ. ವಿಮಾನವನ್ನು ಕೇರಳದ ಕಣ್ಣೂರಿಗೆ ಕಳುಹಿಸಿದ್ದಾರೆ ಅಧಿಕಾರಿಗಳು. ಕೇರಳದ ಕಾಸರಗೋಡಿನಲ್ಲಿ 180 ಕ್ಕೂ ಹೆಚ್ಚು ಕನ್ನಡಿಗರು ಅತಂತ್ರರಾಗಿದ್ದರು. ಬಸ್ ತರಿಸಿ ಮಂಗಳೂರಿಗೆ ಹೋಗಲು ಅಧಿಕಾರಿಗಳು ತಾಕೀತು ಮಾಡಿದ್ದಾರೆ. ಯು ಟಿ ಖಾದರ್ ಮಧ್ಯಸ್ಥಿಕೆಯಲ್ಲಿ ಕನ್ನಡಿಗರು ತವರು ತಲುಪಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!