May 14, 2024, 11:32 AM IST
ಬೆಂಗಳೂರು(ಮೇ.14): ಇಸ್ರೇಲ್ ಹಮಾಸ್ ಯುದ್ಧ ಹಿನ್ನಲೆಯಲ್ಲಿ ಇಸ್ರೇಲ್ ಸಾಕಷ್ಟು ಸಂಕಷ್ಟಗಳನ್ನ ಎದುರಿಸಿದೆ. ಭಾರತ ಕೂಡ ಇಸ್ರೇಲ್‌ಗೆ ಸಂಕಷ್ಟದ ಸಂದರ್ಭದಲ್ಲಿ ಸಾಕಷ್ಟು ಸಹಾಯ ಮಾಡಿದೆ. ಯುದ್ಧ ಎದುರಿಸಿರೋ ಇಸ್ರೇಲ್‌ಗೆ ಇದೀಗ 76 ರ ಸ್ವಾತಂತ್ರ್ಯ ಸಂಭ್ರಮ. ಈ ಹಿನ್ನಲೆಯಲ್ಲಿ ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಯನ್ನ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಆಯೋಜನೆ ಮಾಡಲಾಗಿತ್ತು. ಮೊದಲಿಗೆ ಭಾರತದ ರಾಷ್ಟ್ರಗೀತೆ ಬಳಿಕ ಇಸ್ರೇಲ್ ರಾಷ್ಟ್ರಗೀತೆ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನ ಆಚರಿಸಲಾಗಿದೆ.
ವಿಜಯ್ ದೇವರಕೊಂಡ ರಶ್ಮಿಕಾ ಪ್ರೇಮದಲ್ಲಿ ಮೂಡಿದೆ ಬಿರುಕು: ಇವರಿಬ್ಬರ ಮಧ್ಯೆ ಇದ್ದ ಸ್ನೇಹ ಪ್ರೀತಿ ಕಿತ್ತು ಹೋಗಿದೆಯಾ?
ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಹಾಗೂ ರಾಯಭಾರಿ ಕಚೇರಿ ಅಧಿಕಾರಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇನ್ನೂ ಇದೇ ವೇಳೆ ಇಸ್ರೇಲ್‌ನ ಕೈನ್ಸಿಲ್ ಜನರಲ್ ಟ್ಯಾಮಿ ಬೆನ್ ಹ್ಯಾಮ್ ಮಾತನಾಡಿ ಇಸ್ರೇಲ್ ಹಮಾಸ್ ಯುದ್ಧದಲ್ಲಿ ಮಕ್ಕಳು, ಹೆಣ್ಣು, ಗಂಡುಮಕ್ಕಳನ್ನ ಒತ್ತೆಯಾಳಾಗಿ 132 ಇದ್ದರು ಅವರು ಮತ್ತೆ ಮರಳಿ ಮನೆಗೆ ಬಂದಿದ್ದಾರೆ ಇವತ್ತು ಖುಷಿಯಾಗುತ್ತಿದೆ ಅಂತ ಹೇಳಿದ್ರು.