Feb 18, 2022, 6:10 PM IST
ಬೆಂಗಳೂರು (ಫೆ. 18): ಹಿಜಾಬ್ ಪರ-ವಿರುದ್ಧ ಹೈಕೋರ್ಟಲ್ಲಿ ತೀವ್ರ ವಾದ ಜೋರಾಗಿದೆ. ಎಲ್ಲರ ಚಿತ್ತ ಹೈಕೋರ್ಟ್ ವಿಚಾರಣೆಯತ್ತ ನೆಟ್ಟಿದೆ. ಪ್ರತಿವಾದಿಗಳ ಪರ ಎಜಿ ಪ್ರಭುಲಿಮಗ ನಾವದಗಿ ವಾದ ಮಂಡಿಸಿದ್ದಾರೆ.
ಹಿಜಾಬ್ ಕಡ್ಡಾಯಗೊಳಿಸುವ ಅಥವಾ ನಿಷೇಧಿಸುವ ಯಾವ ಮಾತನ್ನೂ ಸರ್ಕಾರ ಹೇಳಿಲ್ಲ. ಕಾಲೇಜುಗಳಿಗೆ ಸಂಪೂರ್ಣ ಸ್ವಾತಂತ್ರ ನೀಡಲಾಗಿದೆ' ಎಂದು ಎಜಿ ನಾವದಗಿ ಪ್ರತಿಪಾದಿಸಿದರು. ಆಗ ನ್ಯಾಯಾಲಯ ಫೆ. 05 ರ ಸರ್ಕಾರದ ಆದೇಶದ ಮುಂದಿನ ಅಂಶವನ್ನು ಓದಿ ಹೇಳಿತು.
'ಹಿಜಾಬ್ ಇಸ್ಲಾಂ ಅವಿಭಾಜ್ಯ ಅಂಗವಲ್ಲ, ಇದು ರಾಜ್ಯ ಸರ್ಕಾರದ ಸ್ಪಷ್ಟ ನಿಲುವು: ಎಜಿ ಪ್ರಭುಲಿಂಗ ನಾವದಗಿ