Jul 19, 2022, 3:59 PM IST
ಹಾವೇರಿ (ಜು. 19): ಹಿರೇಕೆರೂರು (Hirekeruru) ತಾಲೂಕಿನ ಇಲ್ಲಿನ ಗಂಗಾಯಿಕೊಪ್ಪ ಸರ್ಕಾರಿ ಶಾಲೆ ಶಿಥಿಲಾವಸ್ತೆ ತಲುಪಿದೆ. ಜೋರು ಮಳೆ ಬಂದ್ರೆ ತರಗತಿಯಲ್ಲಿ ಕೂರಲಾಗದೇ ನಿಂತುಕೊಂಡೇ ಪಾಠ ಕೇಳುವ ಪರಿಸ್ಥಿತಿ ತಲುಪಿದೆ. ತಾತ್ಕಾಲಿಕವಾಗಿ ದೇಗುಲಗಳಲ್ಲಿ ಪಾಠ ಕೇಳುವ ಹಾಗಾಗಿದೆ. ನಮಗೆ ಹೊಸ ಕಟ್ಟಡ ಮಾಡಿಕೊಡಿ ಎಂದು 9 ವರ್ಷಗಳಿಂದ ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಶಾಸಕ ಬಿ ಸಿ ಪಾಟೀಲ್, ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ.
ವರದಿ ಪ್ರಸಾರದ ಬಳಿಕ ಡಿಸಿ ಸಂಜಯ್ ಶೆಟ್ಟಣ್ಣನವರ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಹೆಬ್ಬಾರ್ ಕರೆ ಮಾಡಿ ತುರ್ತಾಗಿ 2 ಲಕ್ಷ ರೂ ಬಿಡುಗಡೆ ಮಾಡುವಂತೆ ಸೂಚನೆ ನೀಡಿದ್ದಾರೆ. 11 ಲಕ್ಷ ರೂ ವೆಚ್ಚದಲ್ಲಿ ಶಾಲಾ ಟೆಂಡರ್‌ಗೆ ಸೂಚಿಸಲಾಗಿದೆ. ಶಾಲೆಗೆ ತೆರಳಿ ಪರಿಸ್ಥಿತಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.